×
Ad

ಬೆಂಗಳೂರಿನಲ್ಲಿ ಮುಂದುವರಿದ ಮಳೆ; ಹಲವೆಡೆ ಜನಜೀವನ ಅಸ್ತವ್ಯಸ್ತ

Update: 2023-05-04 21:26 IST

ಬೆಂಗಳೂರು, ಮೇ 4: ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿ ಹಿನ್ನೆಲೆಯಲ್ಲಿ ಗುರುವಾರ ನಗರದ ಹಲವೆಡೆ ಸತತ ಒಂದು ಗಂಟೆಗೂ ಹೆಚ್ಚು ಕಾಲ ಮಳೆ ಸುರಿದಿದ್ದು, ಕೆಲ ಕಾಲ ಜನಜೀವನ ಅಸ್ತವ್ಯಸ್ತಗೊಂಡಿತು.

ಕೆ.ಆರ್.ಮಾರುಕಟ್ಟೆ, ಕಾರ್ಪೂರೇಷನ್, ಶಿವಾಜಿನಗರ, ಯಶವಂತಪುರ, ಬಿಟಿಎಂ ಲೇಔಟ್, ವಸಂತನಗರ ಸೇರಿ ನಗರದ ಇತರ ಬಡಾವಣೆಗಳಲ್ಲಿ ಎಡಬಿಡದೆ ಮಳೆ ಸುರಿಯಿತು. ಇದರಿಂದ ಸಾರ್ವಜನಿಕ ಪ್ರಯಾಣಿಕರು, ವಾಹನ ಸವಾರರು ಪರದಾಡುವಂತಾಯಿತು. ಸಾರ್ವಜನಿಕರು ಮಳೆ ರಕ್ಷಣೆಗಾಗಿ ಜಂಕ್ಷನ್, ಫ್ಲೈಓವರ್, ಮರದ ಕೆಳಗೆ, ಬಸ್ ನಿಲ್ದಾಣಗಳಲ್ಲಿ ನಿಂತುಕೊಂಡು ರಕ್ಷಣೆ ಪಡೆಯುತ್ತಿದ್ದ ದೃಶ್ಯ ಕಂಡುಬಂತು. 

ಇನ್ನೂ 3 ದಿನ ಮಳೆ: ನಗರದಲ್ಲಿ ನಾಳೆ(ಮೇ 5)ಯಿಂದ (ಮೇ 7)ರವಿವಾರದ ವರೆಗೆ ಹಗುರದಿಂದ ಕೂಡಿದ ಸಾಧಾರಣ ಮಳೆ ಬೀಳುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. 

Similar News