×
Ad

ಮಂಗಳೂರು: ಆನ್‌ಲೈನ್ ವಂಚನೆ; ಪ್ರಕರಣ ದಾಖಲು

Update: 2023-05-04 22:13 IST

ಮಂಗಳೂರು, ಮೇ 4: ವ್ಯಕ್ತಿಯೋರ್ವರು ಎ.22ರಂದು ಫೇಸ್‌ಬುಕ್‌ನಲ್ಲಿ ಬಂದ ಜಾಹೀರಾತು ನೋಡಿ  ಸೌಂಡ್ ಸ್ಪೀಕರ್ ಆರ್ಡರ್ ಮಾಡಿ 1 ಲ.ರೂ. ಕಳೆದುಕೊಂಡಿರುವುದಾಗಿ ಸೆನ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಎ.29ರಂದು ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ ಕೋರಿಯರ್ ಸಂಸ್ಥೆಯಿಂದ ಮಾತನಾಡುತ್ತಿರುವುದಾಗಿ ತಿಳಿಸಿ ‘ನೀವು ಸೌಂಡ್ ಸ್ಪೀಕರ್‌ನ್ನು ಆರ್ಡರ್ ಮಾಡಿದ್ದೀರಿ. ಅದರ ಕೋರಿಯರ್ ಚಾರ್ಜ್ 5 ರೂ. ಆಗುತ್ತದೆ. ಆ ಹಣವನ್ನು ಪಾವತಿಸುವಂತೆ ತಿಳಿಸಿ ಮೊಬೈಲ್‌ಗೆ ಲಿಂಕ್ ಕಳುಹಿಸಿದ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಅಪರಿಚಿತ ವ್ಯಕ್ತಿಯು ತನಗೊಂದು ದೂರವಾಣಿ ನಂಬರ್ ಕಳುಹಿಸಿ ಲಿಂಕ್ ಕಳುಹಿಸುವಂತೆ ಸೂಚಿಸಿದ. ಅದರಂತೆ ತಾನು ಲಿಂಕ್‌ನ್ನು ಕಳುಹಿಸಿದೆ. ಆ ಬಳಿಕ ತನ್ನ ಮೊಬೈಲ್‌ಗೆ ಒಟಿಪಿ ಬಂತು. ಬಳಿಕ ತನ್ನ ಖಾತೆಯಿಂದ 5 ರೂ. ಕಡಿತಗೊಂಡಿದೆ. ಮತ್ತೆ ಮೇ 1ರಂದು ತನ್ನ  ಖಾತೆಯಿಂದ 99,990 ರೂ. ವರ್ಗಾವಣೆಯಾಗಿದೆ. ಅಪರಿಚಿತ ವ್ಯಕ್ತಿಯು ಒಟಿಪಿ ಪಡೆದುಕೊಂಡು ಒಟ್ಟು 1,00,004 ರೂ.ವನ್ನು ವರ್ಗಾಯಿಸಿಕೊಂಡು ವಂಚಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಅದರಂತೆ ನಗರದ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News