ಬೆಂಗಳೂರು: ಪ್ರಧಾನಿ ಮೋದಿ ಉದ್ಘಾಟಿಸಿದ್ದ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ 2 ರಲ್ಲಿ ಮಳೆ ನೀರು ಸೋರಿಕೆ!

Update: 2023-05-04 17:33 GMT

ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕೆಲ ತಿಂಗಳ ಹಿಂದೆ ಲೋಕಾರ್ಪಣೆ ಮಾಡಿದ್ದ  ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2ರ ಆಗಮನ ದ್ವಾರ ಪ್ರದೇಶದ ಹೊರಗೆ ಮಳೆ ನೀರು ಸೋರಿಕೆ ಕಂಡುಬಂದಿದೆ. ಇದರಿಂದ ಪ್ರಯಾಣಿಕರು ಮತ್ತು ವಿಮಾನ ನಿಲ್ದಾಣ ನೈರ್ಮಲ್ಯ ಸಿಬ್ಬಂದಿ ಸಂಕಷ್ಟಕ್ಕೆ ಸಿಲುಕಿದ ಘಟನೆ ವರದಿಯಾಗಿದೆ. 

ಕೆಲ ತಿಂಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು, ಅಂದಾಜು 5 ಸಾವಿರ ಕೋಟಿ ವೆಚ್ಚದ ಟರ್ಮಿನಲ್ - 2 ಅನ್ನು ಲೋಕಾಪರ್ಣೆ ಮಾಡಿದ್ದರು. ಟರ್ಮಿನಲ್‌ 2 ಆಗಮನದ ಸ್ಥಳದಲ್ಲಿ ಮಳೆನೀರು ನಿಲ್ಲುವ ವಿಡಿಯೋಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆ ವ್ಯಕ್ತವಾಗಿದೆ.

ಈ ಸಂಬಂಧ ಟ್ವೀಟ್ ಮಾಡಿರುವ ವಿಪಕ್ಷ ಕಾಂಗ್ರೆಸ್, "ಸೋರುತಿಹುದು ಕರ್ನಾಟಕದ ಘನತೆಯ ಮಾಳಿಗೆ, ಬಿಜೆಪಿಯ ಭ್ರಷ್ಟಾಚಾರದಿಂದ" ಬಿಜೆಪಿಯ 40% ಕಮಿಷನ್ ಲೂಟಿ ಬೆಂಗಳೂರಿನ ಮರ್ಯಾದೆಯನ್ನು ವಿಶ್ವಮಟ್ಟದಲ್ಲಿ ಹರಾಜು ಹಾಕಿದೆ. ಮೋದಿ ಉದ್ಘಾಟಿಸಿದ ಕೆಲವೇ ದಿನಗಳಲ್ಲಿ ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್ 2ರ ಮಾಳಿಗೆ ಸೋರಿ ನೀರು ನಿಂತಿದೆ'' ಎಂದು ಟೀಕಿಸಿದೆ, 

Similar News