×
Ad

ಪ್ರಧಾನಿ ಮೋದಿ ರೋಡ್ ಶೋ ಮಧ್ಯೆ ಸಿಲುಕಿದ ಆ್ಯಂಬುಲೆನ್ಸ್; ಸಂಚಾರ ಅಸ್ತವ್ಯಸ್ತ: ವೀಡಿಯೊ ವೈರಲ್

Update: 2023-05-06 14:44 IST

ಬೆಂಗಳೂರು: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನಡೆಸುತ್ತಿರುವ ರೋಡ್ ಶೋ ನಿಂದಾಗಿ ನಗರದ ಮುಖ್ಯ ರಸ್ತೆಯಲ್ಲಿ ಟ್ರಾಫಿಕ್ ಜಾಂ ಉಂಟಾಗಿದ್ದು, ಆ್ಯಂಬುಲೆನ್ಸ್ ಟ್ರಾಫಿಕ್ ನಡುವೆ ಸಿಲುಕಿಕೊಂಡಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ಬಗ್ಗೆ ಟ್ವಿಟರ್ ನಲ್ಲಿ ವಿಡಿಯೋ ಹಂಚಿಕೊಂಡಿರುವ ಕಾಂಗ್ರೆಸ್ ಹಿರಿಯ ನಾಯಕ, 'ರಾಜ್ಯಸಭಾ ಸದಸ್ಯ ಜೈರಾಮ್ ರಮೇಶ್, ಪ್ರಧಾನಿಗೆ ನಾಚಿಕೆ ಇದ್ದರೆ ಅಥವಾ ಬೆಂಗಳೂರಿನ ಜನರ ಬಗ್ಗೆ ಕಿಂಚಿತ್ತಾದರೂ ಕಾಳಜಿ ಇದ್ದರೆ, ತಮ್ಮ ರೋಡ್ ಶೋ ಅನ್ನು ತಕ್ಷಣವೇ ರದ್ದುಗೊಳಿಸಲಿ.  ವಿಪರ್ಯಾಸವೆಂದರೆ ಅವರು ಕೇವಲ ತಮ್ಮ ಗ್ರ್ಯಾಂಡ್ ತಮಾಶಾ ಬಗ್ಗೆ ಮಾತ್ರ ಕಾಳಜಿ ವಹಿಸುತ್ತಾರೆ ಎಂದು ನಮಗೆಲ್ಲರಿಗೂ ತಿಳಿದಿದೆ' ಎಂದು ಕುಟುಕಿದ್ದಾರೆ.

''ಪ್ರಧಾನಿ ಮೋದಿ ಅವರ ರೋಡ್ ಶೋನಿಂದ ರೋಗಿಗಳು ಪರದಾಡುವಂತಾಗಿದೆ. ಬೆಂಗಳೂರಿನ ಜೆಪಿ ನಗರ ಮೆಟ್ರೋ ನಿಲ್ದಾಣದ ಬಳಿ ಆಂಬ್ಯುಲೆನ್ಸ್‌ಗಳು 20 ನಿಮಿಷಗಳ ಕಾಲ ಟ್ರಾಫಿಕ್‌ನಲ್ಲಿ ಜಾಮ್ ಆಗಿದ್ದವು. ಜೀವಕ್ಕಿಂತ ಪ್ರಧಾನಿಗಳಿಗೆ ರೋಡ್ ಶೋ ಮುಖ್ಯವಾಗಿದೆ'' ಎಂದು ರಾಜ್ಯ ಯುವ ಕಾಂಗ್ರೆಸ್ @IYCKarnataka ಟ್ವೀಟ್ ಮಾಡಿದೆ. 

Similar News