×
Ad

ಬೋಟಿನಿಂದ ಬಿದ್ದು ಮೀನುಗಾರ ಮೃತ್ಯು

Update: 2023-05-06 21:28 IST

ಕಾಪು, ಮೇ 6: ಮೀನುಗಾರಿಕಾ ಬೋಟಿನಿಂದ ಆಯತಪ್ಪಿ ಸಮುದ್ರಕ್ಕೆ ಬಿದ್ದು ತಮಿಳುನಾಡು ಮೂಲದ ವ್ಯಕ್ತಿ ಯೊಬ್ಬರು ಮೃತಪಟ್ಟ ಬಗ್ಗೆ ವರದಿಯಾಗಿದೆ.

ಮೃತರನ್ನು ತಮಿಳುನಾಡು ಮೂಲದ ರಾಜನ್(32) ಎಂದು ಗುರುತಿಸ ಲಾಗಿದೆ. ಮೇ 1ರಂದು ರಾತ್ರಿ ಬೋಟು ಮಲ್ಪೆಯಿಂದ ಕೆಲಸಗಾರರೊಂದಿಗೆ ಹೊರಟು ಕಟಪಾಡಿಯ ಹತ್ತಿರ ತಲುಪುವಾಗ ಬೋಟಿನಲ್ಲಿದ್ದ ರಾಜನ್ ಬೋಟಿನ ಹಿಂಬದಿಯ ತುದಿಯಲ್ಲಿ ನಿಂತು ಮೂತ್ರ ಮಾಡುತ್ತಿದ್ದರೆನ್ನಲಾಗಿದೆ. ಆಗ ಅವರು ಆಯತಪ್ಪಿಬೋಟಿನಿಂದ ಸಮುದ್ರದ ನೀರಿಗೆ ಬಿದ್ದು ನಾಪತ್ತೆ ಯಾಗಿದ್ದರು. ಮೇ 5ರಂದು ಮಧ್ಯಾಹ್ನ ರಾಜನ್ ಮೃತದೇಹವು ಕಾಪು ಬೀಚ್ ನಲ್ಲಿ ಪತ್ತೆಯಾಗಿದೆ.

ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News