×
Ad

ಬಿಜೆಪಿ ಕೇವಲ ಅಧಿಕಾರವನ್ನು ಮಾತ್ರ ಆಸ್ತಿ ಮಾಡಿಕೊಳ್ಳುತ್ತಿದೆ: ಯುಟಿ ಖಾದರ್

Update: 2023-05-06 22:47 IST

ಉಳ್ಳಾಲ: ಈ ಬಾರಿಯ ಚುನಾವಣೆ ಕೇವಲ ಕಾಂಗ್ರೆಸ್ ಗೆ ನಡೆಯುವ ಚುನಾವಣೆ ಅಲ್ಲ. ನಾಳೆ ನೀವು ಕೊಡುವ ಮತ ಜನವಿರೋಧಿ ಬಿಜೆಪಿಯ ಆಡಳಿತ ಕೊನೆಗೊಳಿಸಿ ಕಾಂಗ್ರೆಸ್ ಗೆ ಅವಕಾಶ ಕೊಡಬೇಕು. ಜನಪರ ಆಡಳಿತ ಕೊಡದ ಬಿಜೆಪಿ ಗೆದ್ದರೆ ಐದು ವರ್ಷ ಶಿಕ್ಷೆ ಅನುಭವಿಸಬೇಕು. ಸವಲತ್ತು ಕೊಡಲು ಗೊತ್ತಿಲ್ಲದ ಬಿಜೆಪಿ ಕೇವಲ ಅಧಿಕಾರ ವನ್ನು  ಮಾತ್ರ ಆಸ್ತಿ ಮಾಡಿಕೋಳ್ಳುತ್ತಿದೆ ಎಂದು  ಕಾಂಗ್ರೆಸ್ ಅಭ್ಯರ್ಥಿ ಯು ಟಿ ಖಾದರ್ ಹೇಳಿದರು.

ಅವರು ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಕಾಂಗ್ರೆಸ್ ವತಿಯಿಂದ ಅಳೇಕಲದಲ್ಲಿ  ಜರುಗಿದ ಬಹಿರಂಗ ಸಭೆಯಲ್ಲಿ ಮಾತನಾಡಿದರು.

ಬಿಜೆಪಿ ಆಡಳಿತ ನಡೆಸಿದ್ದು ಮಾತ್ರ.ಒಂದೇ ಒಂದು ಯೋಜನೆ ಜನರಿಗೆ ಕೊಟ್ಟಿಲ್ಲ. ಬಿಜೆಪಿ ಸರ್ಕಾರದ ದರ ಏರಿಕೆ ಯಿಂದ ಜನರು ಬೀದಿಗೆ ಬಿದ್ದಿದ್ದಾರೆ. 150 ರೂ.ಇದ್ದ ಮೆಣಸು ದರ 500 ಮಾಡಿದ ಈ ಬಿಜೆಪಿ ಸರ್ಕಾರ ಅಭಿವೃದ್ಧಿ ಯೋಜನೆ ಕೈಬಿಟ್ಟು ಭ್ರಷ್ಟಾಚಾರ ದಲ್ಲಿ ನಿರತರಾಗಿದೆ ಎಂದು ಆರೋಪಿಸಿದರು.ತಾ.ಪಂ.ಮಾಜಿ ಸದಸ್ಯ ಮುಸ್ತಫಾ ಮಲಾರ್ ಮಾತನಾಡಿದರು.

ಕಾರ್ಯಕ್ರಮದಲ್ಲಿ ನಗರಸಭೆ ಕೌನ್ಸಿಲರ್ ಇಸ್ಮಾಯಿಲ್, ಜಿಲ್ಲಾ ವಕ್ತಾರ  ಮೌಸೀರ್ ಸಾಮಣಿಗೆ, ಕಾರ್ಯಕರ್ತ ರಾದ ಹನೀಫ್ ಕಕ್ಕೆತೋಟ, ಅಬ್ಬಾಸ್, ಫಾರೂಕ್,ಇಂತಿಯಾಝ್ ಹಳೆಕೋಟೆ, ಅಲ್ತಾಫ್ ಉಪಸ್ಥಿತರಿದ್ದರು.

Similar News