BMTC ಬಸ್​​ನಲ್ಲಿ ಪ್ರಯಾಣ ಮಾಡಿ ಗಮನ ಸೆಳೆದ ರಾಹುಲ್ ಗಾಂಧಿ

Update: 2023-05-08 07:51 GMT

ಬೆಂಗಳೂರು: ರಾಜ್ಯ ವಿಧಾನ ಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ರಾಜಧಾನಿಗೆ ಬಂದಿರುವ ರಾಹುಲ್ ಗಾಂಧಿ ಅವರು ಸೋಮವಾರ ಬಿಎಂಟಿಸಿ ಬಸ್​​ನಲ್ಲಿ ಪ್ರಯಾಣ ಮಾಡಿರುವುದು ಗಮನ ಸೆಳೆದಿದೆ. 

ರಾಜ್ಯ ಪ್ರವಾಸದಲ್ಲಿರುವ ರಾಹುಲ್​ ಗಾಂಧಿ ನಿನ್ನೆ(ಮೇ 7) ಬೆಂಗಳೂರಿನಲ್ಲಿ ರೋಡ್ ಶೋದಲ್ಲಿ ಪಾಲ್ಗೊಂಡು ಬೆಂಗಳೂರಿನಲ್ಲಿಯೇ ವಾಸ್ತವ್ಯ ಹೂಡಿದ್ದರು. ಇಂದು ಬೆಳಗ್ಗೆ ನಗರದ ಕನ್ನಿಂಗ್​​ಹ್ಯಾಮ್ ರಸ್ತೆಯ ಕೆಫೆಯೊಂದರಲ್ಲಿ ಗ್ರಾಹಕರ ಜೊತೆ ಕಾಫಿ ಕುಡಿದಿದ್ದಾರೆ. ಬಳಿಕ ಬಿಎಂಟಿಸಿ ಬಸ್​​ನಲ್ಲಿ ಪ್ರಯಾಣ ಮಾಡಿದರು. ಈ ಸಂದರ್ಭದಲ್ಲಿ ರಾಹುಲ್ ಗಾಂಧಿ ಪ್ರಯಾಣಿಕರೊಂದಿಗೆ ಸಮಾಲೋಚನೆ ನಡೆಸಿದರು. 

ಅವರ ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. 

Similar News