×
Ad

ಕೊಣಾಜೆ: ಅಂಗವೈಕಲ್ಯತೆಯ ನಡುವೆಯೂ ಎಸೆಸೆಲ್ಸಿಯಲ್ಲಿ ಉತ್ತಮ ಸಾಧನೆ ಮಾಡಿದ ಫಾತಿಮತ್ ನಿಶಾ

Update: 2023-05-08 17:43 IST

ಕೊಣಾಜೆ: ಬಡತನ, ಅಂಗವೈಕಲ್ಯತೆ ಇದ್ದರೂ ಶಿಕ್ಷಣ ಪಡೆದು ಉನ್ನತ ಸಾಧನೆ ಮಾಡಬೇಕೆನ್ನುವ ಕನಸನ್ನು ಇಟ್ಟುಕೊಂಡಿರುವ ಕೊಣಾಜೆ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಫಾತಿಮತ್ ನಿಶಾ ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾಳೆ ಹಾಗೂ ಶಾಲೆಗೆ ಟಾಪರ್ ಆಗಿ ಮೂಡಿಬಂದಿದ್ದಾಳೆ.

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ (569) 91% ಅಂಕವನ್ನು  ಪಡೆಯುವ ಮೂಲಕ ಕೊಣಾಜೆ ಪದವು ಶಾಲೆಯಲ್ಲಿ ತಾನೇ ಟಾಪರ್ ಆಗಿ ಗುರುತಿಸಿದ್ದಾಳೆ. ಸರ್ಕಾರಿ ಪ್ರೌಢಶಾಲೆಯಲ್ಲಿ ಕಲಿಯುತ್ತಿರುವ ಈಕೆ ಯಾವುದೇ ಮನೆ ಪಾಠ ಇಲ್ಲದೆಯೇ ಜೊತೆಗೆ ಅಂಗವೈಕಲ್ಯತೆಯ ನಡುವೆಯೂ ಈಕೆ ಸಾಧನೆ ಮೆರೆದಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಮುಂದೆ ಕೂಡಾ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ದೊರೆತರೆ ಶಿಕ್ಷಣದ ಮೂಲಕ ಉನ್ನತ ಹುದ್ದೆ ಪಡೆದು ಸಮಾಜಸೇವೆ ಮಾಡುವಾಸೆ ಈಕೆಯದ್ದು.

Similar News