ನಿರ್ಬಂಧ ಉಲ್ಲಂಘನೆ; 200 ಮದ್ಯದಂಗಡಿಗಳ ವಿರುದ್ಧ ಕ್ರಮ
Update: 2023-05-08 18:35 IST
ಬೆಂಗಳೂರು, ಮೇ 8: ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ನಿರ್ಬಂಧ ಹೇರಿದ್ದರೂ ಕಾನೂನು ಉಲ್ಲಂಘಿಸಿದ 200 ಮದ್ಯದಂಗಡಿಗಳ ವಿರುದ್ಧ ಬೆಂಗಳೂರು ಜಿಲ್ಲಾಡಳಿತ ತಿಳಿಸಿದೆ.
ಕಾನೂನು ಉಲ್ಲಂಘಿಸಿರುವ ನಗರದ ಮದ್ಯದಂಗಡಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಒಂದು ವೇಳೆ ಮದ್ಯ ಮಾರಾಟ ನಿಷೇಧ ಆದೇಶವನ್ನು ಪಾಲಿಸದಿದ್ದರೆ ಪರವನಗಿ ರದ್ದು ಮಾಡಲಾಗುವುದು ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ದಯಾನಂದ ಕೆ.ಎ. ಮಾಹಿತಿ ನೀಡಿದ್ದಾರೆ.