ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಮೇಲೆ ಸಿಸಿಬಿ ದಾಳಿ: ಶೋಧ
Update: 2023-05-08 19:19 IST
ಬೆಂಗಳೂರು, ಮೇ 8: ಚುನಾವಣೆ ಹಿನ್ನೆಲೆ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರವಹಿಸಿರುವ ಸಿಸಿಬಿ ಪೊಲೀಸರು, ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರ ಮೇಲೆ ದಾಳಿ ಮಾಡಿದ್ದಾರೆ.
ಮತದಾನಕ್ಕೆ ಒಂದೇ ದಿನ ಬಾಕಿಯಿದ್ದು, ಈ ವೇಳೆ ಜೈಲಿನಿಂದ ಕರೆ ಮಾಡಿ ಬೆದರಿಕೆ ಹಾಕುವುದು, ಇಂತವರಿಗೆ ಮತ ಹಾಕಿ ಎಂದು ಒತ್ತಡ ಹಾಕುವ ಶಂಕೆ ಹಿನ್ನಲೆ, ಅಪರಾಧ ವಿಭಾಗದ ಜಂಟಿ ಆಯುಕ್ತ ಡಾ.ಶರಣಪ್ಪ ನೇತೃತ್ವದಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಿದರು ಎಂದು ತಿಳಿದುಬಂದಿದೆ.
ದಾಳಿ ವೇಳೆ ಮೊಬೈಲ್ ಫೋನ್‍ಗಳು, ಅಲ್ಪಪ್ರಮಾಣದ ಡ್ರಗ್ಸ್‍ಹಾಗೂ ಊಟದಪ್ಲೇಟ್‍ನಲ್ಲಿ ತಯಾರಿಸಿದ ಚಾಕುಗಳುಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.