ಮತದಾನ ದಿನದಂದು ಮೆಟ್ರೋ ರೈಲು ಸಂಚಾರ ಮಧ್ಯರಾತ್ರಿಯ ವರೆಗೂ ವಿಸ್ತರಣೆ

Update: 2023-05-08 15:39 GMT

ಬೆಂಗಳೂರು, ಮೇ 8: ವಿಧಾನಸಭಾ ಚುನಾವಣೆಗೆ ಇನ್ನು ಎರಡು ದಿನ ಬಾಕಿಯಿದೆ. ಉಭಯ ಪಕ್ಷಗಳು ಅಬ್ಬರದ ಪ್ರಚಾರ ಕೈಗೊಂಡಿವೆ. ಅದರಂತೆ ಮೇ 10ರಂದು ನಡೆಯುವ ಮತದಾನಕ್ಕೆ ಬಿಎಂಆರ್‍ಸಿಎಲ್ ಮೆಟ್ರೋ ರೈಲು ಸಂಚಾರದ ಅವಧಿಯನ್ನ ಮಧ್ಯರಾತ್ರಿಯ ವರೆಗೆ ವಿಸ್ತರಣೆ ಮಾಡಿದೆ.

ಮೆಟ್ರೋ ಸಂಚಾರದ ವೇಳಾಪಟ್ಟಿ: ಟರ್ಮಿನಲ್ ನಿಲ್ದಾಣಗಳಾದ ಬೈಯಪ್ಪನಹಳ್ಳಿ, ಕೆಂಗೇರಿ, ನಾಗಸಂದ್ರ, ರೇಷ್ಮೆ ಸಂಸ್ಥೆ, ಕೃಷ್ಣರಾಜಪುರ ಮತ್ತು ವೈಟ್‍ಫೀಲ್ಡ್ (ಕಾಡುಗೋಡಿ)ಯಿಂದ ಕೊನೆಯ ರೈಲು ಮೇ 11ರ ರಾತ್ರಿ 12 ಗಂಟೆ 05 ನಿಮಿಷಕ್ಕೆ ಹೊರಡಲಿದೆ. 

ಇನ್ನು ನಾಡಪುಭು ಕೆಂಪೇಗೌಡ ನಿಲ್ದಾಣ, ಮೆಜೆಸ್ಟಿಕ್‍ನಿಂದ ಕೊನೆಯ ರೈಲು ಮೇ 11ರ ರಾತ್ರಿ 12 ಗಂಟೆ 35 ನಿಮಿಷಕ್ಕೆ ಎಲ್ಲ ನಾಲ್ಕು ದಿಕ್ಕುಗಳ ಕಡೆಗೆ ಅಂದರೆ ಬೈಯಪ್ಪನಹಳ್ಳಿ, ಕೆಂಗೇರಿ, ನಾಗಸಂದ್ರ, ರೇಷ್ಮೆ ಸಂಸ್ಥೆಯಿಂದ ಹೊರಡಲಿದೆ. ಈ ಸೇವೆಯನ್ನು ಪೂರ್ಣ ಪ್ರಮಾಣದಲ್ಲಿ ಉಪಯೋಗಿಸಿಕೊಳ್ಳಬೇಕೆಂದು ಬಿಎಂಆರ್‍ಸಿಎಲ್ ಪ್ರಕಟನೆ ಹೊರಡಿಸಿದೆ.

Similar News