×
Ad

ಪುತ್ತೂರು ನನ್ನ ಜನ್ಮಭೂಮಿ, ಉಡುಪಿ ನನ್ನ ಕರ್ಮ ಭೂಮಿ: ವಿನಯಕುಮಾರ್ ಸೊರಕೆ

Update: 2023-05-08 21:43 IST

ಕಾಪು: ಪುತ್ತೂರು ನನ್ನ ಜನ್ಮ ಭೂಮಿ, ಉಡುಪಿ ನನ್ನ ಕರ್ಮ ಭೂಮಿ ಎಂದು ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯಕುಮಾರ್ ಸೊರಕೆ ಹೇಳಿದರು.

ಕಟಪಾಡಿ ಪೇಟೆಯಲ್ಲಿ ನಡೆದ ಬಹಿರಂಗ ಪ್ರಚಾರದ ಸಮಾವೇಶದ ಸಮಾಪನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ ಅವರು,  ನಾನು ಪುತ್ತೂರಿನವನು ಇರಬಹುದು. 23 ವರ್ಷ ಆಯ್ತು ಉಡುಪಿಗೆ ಬಂದು ನಾನು ಇಲ್ಲಿಯ ಮತದಾರ. ಬಿಜೆಪಿ ಅಭ್ಯರ್ಥಿ ಬಳ್ಳಾರೆಯವರು ಅಲ್ವ.. ಬಿಜೆಪಿಯ ಶೋಭಾ ಕರಂದ್ಲಾಜೆ, ಸದಾನಂದ ಗೌಡರು  ಪುತ್ತೂರಿನವರು ಅಲ್ವ ಅಂತಾ ಪ್ರಶ್ನೆ ಮಾಡಿದರು. 

ಕೊನೆಯ ಎರಡು ದಿನದಲ್ಲಿ ಕ್ಷೇತ್ರದಲ್ಲಿ ಕಾಂಚಾಣ ಝಣ ಝಣ ಅನ್ನೋ ಸಾಧ್ಯತೆ ಇದೆ. ಕಾರ್ಯಕರ್ತರು ಬೂತ್ ಮಟ್ಟದಲ್ಲಿ ರಾತ್ರಿ ಕಾವಲು ಕಾಯೋ ಕೆಲಸ ಮಾಡಬೇಕಿದೆ ಎಂದು ಕೈ ಮುಗಿದು ಮನವಿ ಮಾಡಿದ ಸೊರಕೆ  ಇನ್ನುಳಿದ 2 ದಿವಸಗಳ ಹೋರಾಟದಲ್ಲಿ  ನಿರೀಕ್ಷೆ ಮಾಡದ ಫಲಿತಾಂಶ ಬರುತ್ತೆ ಅಂತಾ ಕಾರ್ಯಕರ್ತರಿಗೆ ಉತ್ಸಾಹ ತುಂಬಿದರು.

ಬಿಜೆಪಿ ಪಕ್ಷದ ಅಭ್ಯರ್ಥಿ ಜನರನ್ನ ಇವತ್ತು ಖರೀದಿ ಮಾಡಲು ಹೊರಟಿದ್ದಾರೆ. ನಾಳೆ  ದಿನ ಎಷ್ಟು  ಖರೀದಿ ಮಾಡಬಹುದು ಅನ್ನೋ ವಿಷಯವನ್ನು ಮತದಾರರು ಅರ್ಥೈಸಿಕೊಂಡು ಮತ ಚಲಾವಣೆ ಮಾಡಬೇಕಿದೆ. ಮತದಾರರ ಆಶೀರ್ವಾದದಿಂದ  ಕಾಪು ಕ್ಷೇತ್ರ ವನ್ನು ಐತಿಹಾಸಿಕ ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿನಿ. ಕಾಪು ಕ್ಷೇತ್ರದ ಜನತೆ ಕ್ಷೇತ್ರದ ಅಭಿವೃದ್ಧಿ ಪರ ಅವಿರತ ಬೆಂಬಲ ನೀಡಿದ್ದಾರೆ. ಕಾಪು ಕ್ಷೇತ್ರದ ಜನಪರ ಕೆಲಸ ಕಾರ್ಯಕ್ಕೆ, ಕಾಪು ಕ್ಷೇತ್ರ ದ ಅಭಿವ್ರದ್ಧಿಗೆ ಸಾಕ್ಷಿಗಳು ಬಹಳಷ್ಟಿದೆ ಎಂದರು. 

ನನ್ನ ಶಾಸಕತ್ವದ ಅವಧಿಯಲ್ಲಿ 5 ವರ್ಷದಲ್ಲಿ 15 ದೇವಸ್ಥಾನಕ್ಕೆ ಸಾಕಷ್ಟು ಅನುದಾನ ಒದಗಿಸಿ  ಜೀರ್ಣೋದ್ಧಾರ  ಆಗಿದೆ. ಸದ್ಯ ಕ್ಷೇತ್ರದಲ್ಲಿ  ಶಂಭು ಲಿಂಗೇಶ್ವರ , ಮಾರಿಯಮ್ಮ ದೇವಸ್ಥಾನ  ಸಮರೋಪಾದಿಯಲ್ಲಿ ಜೀರ್ಣೋದ್ಧಾರ ಆಗ್ತಾ ಇದೆ.  ಬಿಜೆಪಿ ಸರ್ಕಾರದಿಂದ 5 ಪೈಸೆ ಅನುದಾನ ಒದಗಿಸಲು ಇದುವರೆಗೂ ಸಾಧ್ಯವಾಗಿಲ್ಲ. ಕಾಪು ಕ್ಷೇತ್ರ ದಲ್ಲಿ ಸುಸಜ್ಜಿತ ಆಸ್ಪತ್ರೆ, ಮೆಡಿಕಲ್ ಕಾಲೇಜು, ಸರಕಾರಿ ಬಸ್ಸಿನ ವ್ಯವಸ್ಥೆ ಆಗುವಂತಹ ವ್ಯವಸ್ಥೆ ಗಳು ಕೂಡಲೇ ಆಗಬೇಕಿದೆ.

ಕಾಂಗ್ರೆಸ್ ಮುಖಂಡರಾದ ದೇವಿ ಪ್ರಸಾದ್ ಶೆಟ್ಟಿ,ರಾಕೇಶ್ ಮಲ್ಲಿ, ಅಬ್ದುಲ್ ಗಫೂರ್,  ದೀಪಕ್ ಕೋಟ್ಯಾನ್ ಜಿತೇಂದ್ರ ಪುಟಾರ್ಡೊ, ಅಖಿಲೇಶ್, ರಮೀಜ್, ಕಾರ್ತಿಕ್, ಶರ್ಪುದ್ದೀನ್, ನಝೀರ್ , ರಾಜಶೇಖರ ಕೋಟ್ಯಾನ್, ಅಶೋಕ್ ಕುಮಾರ್ ಕೊಡವೂರು, ಕಾಪು ದಿವಾಕರ ಶೆಟ್ಟಿ, ನವೀನಚಂದ್ರ ಶೆಟ್ಟಿ, ನವೀನ ಚಂದ್ರ ಸುವರ್ಣ, ಕಿಶನ್ ಹೆಗ್ಡೆ ಕೊಳ್ಕೆಬೈಲ್, ಶಿವಾಜಿ ಸುವರ್ಣ, ದಿನೇಶ್ ಪುತ್ರನ್, ಹರೀಶ್ ಕಿಣಿ, ಶಶಿಧರ ಶೆಟ್ಟಿ, ಗೀತಾ ವಾಗ್ಲೆ, ಸರಸು ಡಿ ಬಂಗೇರ, ಪ್ರಶಾಂತ್ ಜತ್ತನ್, ಪುಷ್ಪ ಅಂಚನ್, ಶ್ರೀಕರ ಅಂಚನ್, ನೈಮ್ ಕಟಪಾಡಿ,ಇಂದಿರಾ ಆಚಾರ್ಯ, ಶಬರೀಶ್ ಸುವರ್ಣ, ಹರಿಪ್ರಸಾದ್ ರೈ, ಸುಗುಣ ಪೂಜಾರ್ತಿ, ಕಲಾವತಿ, ಜೋಸೆಫ್ ಮೊಂತೆರೋ, ಅಶೋಕ್ , ವಿನಯ್ ಬಲ್ಲಾಳ್ , ಪ್ರಭಾ ಶೆಟ್ಟಿ ಉಪಸ್ಥಿತರಿದ್ದರು.

ಹೆಜಮಾಡಿಯಿಂದ ಕಟಪಾಡಿವರೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ  ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರಿಂದ ಬೈಕ್ ರ್ಯಾಲಿ ನಡೆಯಿತು. ಕಾರ್ಯಕರ್ತರಲ್ಲದೇ ಸಾವಿರಾರು ಅಭಿಮಾನಿಗಳು ರಾಲಿಯಲ್ಲಿ ಭಾಗವಹಿಸಿ ಬಹಿರಂಗ ಪ್ರಚಾರವನ್ನು ಯಶಸ್ವಿ ಯಾಗಿ ಸಮಾಪನಗೊಳಿಸಿದರು.

ಹೆಜಮಾಡಿ ಪೇಟೆಯಿಂದ ಹೊರಟ ಬೈಕ್ ರ್ಯಾಲಿ ರಾಷ್ಟ್ರೀಯ ಹೆದ್ದಾರಿ ಮೂಲಕ ಪಡುಬಿದ್ರಿ, ಎರ್ಮಾಳು, ಉಚ್ಚಿಲ, ಮೂಳೂರು, ಕಾಪು, ಪಾಂಗಾಳ ಮೂಲಕ ಕಟಪಾಡಿ ಒಟ್ಟು 25 ಕಿಮೀ ದೂರದ ಬೈಕ್ ರ್ಯಾಲಿಯ ಮೂಲಕ ಪ್ರಚಾರ ವಾಹನದ ಮೇಲೇರಿದ ವಿನಯಕುಮಾರ್ ಸೊರಕೆ ರೋಡ್ ಶೋ ನಡೆಸಿದರು. ಬಳಿಕ ಕಟಪಾಡಿ ಪೇಟೆಯಲ್ಲಿ ಸಮಾರೋಪ ಸಮಾರಂಭ ನಡೆಯಿತು

Similar News