ಮತದಾನ: ಐಟಿ ಉದ್ಯೋಗಿಗಳಿಗೆ ರಜೆ ನೀಡಲು ಸೂಚನೆ

Update: 2023-05-09 16:15 GMT

ಬೆಂಗಳೂರು, ಮೇ 9: ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಐಟಿ ಕಂಪೆನಿಗಳು ಸೇರಿ ಕೆಲವು ಖಾಸಗಿ ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ಮತದಾನ ಮಾಡಲು ವೇತನ ಸಹಿತ ರಜೆಯನ್ನು ನೀಡಬೇಕು ಎಂದು ಬಿಬಿಎಂಪಿ ಸೂಚನೆ ನೀಡಿದೆ.

ನಾಳೆ(ಮೇ 10)ಅರ್ಹ ಮತದಾರ ಉದ್ಯೋಗಿಗಳಿಗೆ ಖಾಸಗಿ ಸಂಸ್ಥೆಗಳು ಹಾಗೂ ಐಟಿ ಕಂಪೆನಿಗಳು ರಜೆಯನ್ನು ಮಂಜೂರು ಮಾಡದಿದ್ದರೆ, 1950 ದೂರವಾಣಿ ಸಂಖ್ಯೆಗೆ ಕರೆ ಮಾಡಿ ದೂರು ದಾಖಲಿಸಬಹುದು ಎಂದು ತಿಳಿಸಲಾಗಿದೆ. 

ಯಾವುದೇ ಖಾಸಗಿ ಕಂಪೆನಿ ಅಥವಾ ಸಂಸ್ಥೆಗಳಿಂದ ಇದನ್ನು ಉಲ್ಲಂಘನೆ ಮಾಡಿದರೆ, ಅದರ ವಿರುದ್ದ 1951ರ ಪ್ರಜಾಪ್ರತಿನಿಧಿ ಕಾಯ್ದೆಯ ಪ್ರಕಾರ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಬಿಬಿಎಂಪಿ ಆದೇಶದಲ್ಲಿ ಎಚ್ಚರಿಕೆಯನ್ನು ನೀಡಿದೆ.  

Similar News