×
Ad

1 ಗಂಟೆ ವೇಳೆಗೆ ದ.ಕ.ಜಿಲ್ಲೆಯಲ್ಲಿ ಶೇ 44.16ರಷ್ಷು ಮತದಾನ

ಪುತ್ತೂರಿನಲ್ಲಿ ಬಿರುಸಿನ ಮತದಾನ

Update: 2023-05-10 14:23 IST

ಮಂಗಳೂರು, ಮೇ 10: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ  ರಾಜ್ಯ ವಿಧಾನ ಸಭೆಯ 8 ಕ್ಷೇತ್ರಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಮಧ್ಯಾಹ್ನ 1 ಗಂಟೆಯ ವೇಳೆಗೆ   ಶೇ 44.16 ಮತದಾನವಾಗಿರುವ ಬಗ್ಗೆ ವರದಿಯಾಗಿದೆ. ಬೆಳಗ್ಗೆ 9 ಗಂಟೆ ವೇಳೆಗೆ ಶೇ  12.47, 11 ಗಂಟೆಗೆ  ಶೇ 28.16 ಮತದಾನವಾಗಿತ್ತು.
1 ಗಂಟೆಯ ತನಕ ನಡೆದಿರುವ ಮತದಾನ ವಿವರ ಇಂತಿವೆ.

ಬೆಳ್ತಂಗಡಿ ಶೇ 44.82, ಮೂಡಬಿದ್ರೆ ಶೇ 44.45, ಮಂಗಳೂರು ನಗರ ಉತ್ತರ ಶೇ. 43.43, ಮಂಗಳೂರು ನಗರ ದಕ್ಷಿಣ ಶೇ. 38.44, ಮಂಗಳೂರು ಶೇ. 43.85, ಬಂಟ್ವಾಳ ಶೇ 46.53, ಪುತ್ತೂರು ಶೇ 47.47, ಸುಳ್ಯ ಶೇ 45.10ರಷ್ಟು ಮತದಾನವಾಗಿದೆ ಎಂದು ವರದಿ ತಿಳಿಸಿದೆ.

ಮಂಗಳೂರು ನಗರ ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಭರತ್ ಶೆಟ್ಟಿ  ಅವರು ಕದ್ರಿ ಕೆಪಿಟಿ ಬೂತ್ ಸಂಖ್ಯೆ 132ರಲ್ಲಿಮತ ಚಲಾಯಿಸಿದರು.

ರಾಜ್ಯ ವಿಧಾನ ಸಭೆಯ ವಿಪಕ್ಷ ಉಪ ನಾಯಕ ಮತ್ತು  ಮಂಗಳೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯು.ಟಿ. ಖಾದರ್ ಬೋಳಿಯಾರ್ ಗ್ರಾಮದ ಜಾರದಗುಡ್ಡೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತ ಚಲಾಯಿಸಿದ್ದಾರೆ.

ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ.ವೇದವ್ಯಾಸ ಕಾಮತ್ ಗಾಂಧಿನಗರ ದ.ಕ.ಜಿ.ಪಂ. ಶಾಲೆಯ ಮತಗಟ್ಟೆಯಲ್ಲಿ ಮತದಾನ ಮಾಡಿದರು.

ವಿಧಾನ ಪರಿಷತ್ ಸದಸ್ಯ  ಕಾಂಗ್ರೆಸ್‌ನ ಡಾ.ಮಂಜುನಾಥ ಭಂಡಾರಿ ಕದ್ರಿ ದ.ಕ.ಜಿ.ಪಂ ಹಿ.ಪ್ರಾ ಶಾಲಾ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

Similar News