ದೇರಳಕಟ್ಟೆ : ಕ್ಷೇಮ ಆಸ್ಪತ್ರೆಯಲ್ಲಿ ದಾದಿಯರ ದಿನಾಚರಣೆ

Update: 2023-05-12 16:15 GMT

ಕೊಣಾಜೆ: ದೇರಳಕಟ್ಟೆಯಲ್ಲಿರುವ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಜಸ್ಟಿಸ್ ಕೆ.ಎಸ್.ಹೆಗ್ಡೆ ಚಾರಿಟೇಬಲ್ ಆಸ್ಪತ್ರೆಯ ವತಿಯಿಂದ ಅಂತರಾಷ್ಟ್ರೀಯ ದಾದಿಯರ ದಿನಾಚರಣೆ ಶುಕ್ರವಾರ ನಿಟ್ಟೆ ಕ್ಯಾಂಪಸ್ ನ ಗ್ಲಾಸ್ ಹೌಸ್ ನಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಿಟ್ಟೆ ಸ್ವಾಯುತ್ತೆಗೊಳ್ಳಲಿರುವ ವಿಶ್ವವಿದ್ಯಾನಿಲಯದ ಕುಲಪತಿ ಡಾ. ಸತೀಶ್ ಕುಮಾರ್ ಭಂಡಾರಿ ಅವರು ಕೆ.ಎಸ್ ಹೆಗ್ಡೆ ಆಸ್ಪತ್ರೆಗೆ ಸಿಕ್ಕಿರುವ ಅಂತರಾಷ್ಟ್ರೀಯ ಮಾನ್ಯತೆಗಳಿಗೆ, ಯಶಸ್ಸಿಗೆ ದಾದಿಯರ ನಿಸ್ವಾರ್ಥ ಸೇವೆಗಳು ಕಾರಣವಾಗಿದೆ. ನೂತನ ತಂತ್ರಜ್ಞಾನಗಳನ್ನು ಅರಿತುಕೊಂಡು ಹೊಸಹಾದಿಯಲ್ಲಿ ನಾವೀನ್ಯತೆಯ ಜ್ಞಾನದೊಂದಿಗೆ ಕರ್ತವ್ಯದಲ್ಲಿ ಮುಂದುವರಿಯಿರಿ ಎಂದು  ಹೇಳಿದರು.

ಕೆ.ಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ನರ್ಸಿಂಗ್ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳಾಗಿವೆ.ಹಿಂದೆ ಇದ್ದಂತಹ 2 ಶಿಫ್ಟ್ ನ ಕರ್ತವ್ಯವನ್ನು ಮೂರಕ್ಕೆ ವಿಸ್ತರಿಸಲಾಗಿದೆ. ಇದರಿಂದ 12 ಗಂಟೆಯ ಕರ್ತವ್ಯದಲ್ಲಿ ಬದಲಾವಣೆಗಳಾಗಿವೆ ಎಂದರು. 

ದಾದಿಯರು ಆಸ್ಪತ್ರೆಗಳ ಹೃದಯ ಹಾಗೂ ಆತ್ಮವಿದ್ದಂತೆ. ಮಾನವೀಯ ಮೌಲ್ಯಗಳಿಗೆ ಬೆಲೆಕೊಟ್ಟು ಕರ್ತವ್ಯ ನಿಭಾಯಿಸುವವರು. ಸೇವಾ ಕಾರ್ಯಗಳಿಂದ ಕರ್ತವ್ಯದ ಮೇಲಿನ ಶ್ರದ್ಧೆಯೂ ಹೆಚ್ಚಾಗುವುದು. ಇದೇ ಹಾದಿಯಲ್ಲಿ ಇರುವ ದಾದಿಯರು ಶ್ರದ್ದೆಯಿಂದ ಒಗ್ಗಟ್ಟಾಗಿ ಕರ್ತವ್ಯ ನಿರ್ವಹಿಸುವವರಾಗಿದ್ದಾರೆ ಎಂದರು.

ಫ್ಲೋರೆನ್ಸ್ ನೈಟಿಂಗೇಲ್ ಸ್ಮರಣಾರ್ಥ ಆಚರಿಸಲಾಗುತ್ತಿರುವ ಅಂತರಾಷ್ಟ್ರೀಯ ದಾದಿಯರ ದಿನಾಚರಣೆ ಅಂಗ ವಾಗಿ ಕೇಕ್ ಕತ್ತರಿಸಿ, ಮೇಣದ ಬತ್ತಿ ಉರಿಸಿ ವಿಶಿಷ್ಟವಾಗಿ ಆಚರಿಸಲಾಯಿತು. ಇದೇ ಸಂದರ್ಭ ಕಾರ್ಯಕ್ರಮದ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿಯನ್ನು ವಿತರಿಸಲಾಯಿತು.

ಈ ಸಂದರ್ಭ ಕ್ಷೇಮ ಆಸ್ಪತ್ರೆಯ ಮಕ್ಕಳ ಶಸ್ತ್ರಚಿಕಿತ್ಸಾ ತಜ್ಞ ಡಾ.ಸಂದೀಪ್ ರೈ, ಸಹಾಯಕ ವೈದ್ಯಕೀಯ ಅಧೀಕ್ಷಕ ಡಾ. ಮುರಳೀಧರ್ ಪೈ, ನರ್ಸಿಂಗ್ ಕಾಲೇಜು ಪ್ರಾಂಶುಪಾಲೆ ಡಾ. ಫಾತಿಮಾ ಡಿಸಿಲ್ವಾ, ನರ್ಸಿಂಗ್ ವಿಭಾಗದ ಅಧೀಕ್ಷಕಿ ಕರ್ನಲ್ ಜಿ.ಜೆ. ಎಲಿಜಬೆತ್ ಉಪಸ್ಥಿತರಿದ್ದರು.

ಸಹಾಯಕ ವೈದ್ಯಕೀಯ ಅಧೀಕ್ಷಕಿ ಡೆರಿಲ್ ಅರೇನ್ಹ ವಂದಿಸಿದರು.  ಅನಿತಾ ಸೆಬಾಸ್ಟಿಯನ್ ಕಾರ್ಯಕ್ರಮ ನಿರೂಪಿಸಿದರು.

Similar News