×
Ad

ಮುಂದಿನ ಚುನಾವಣೆಯಲ್ಲಿ 41ಸಾವಿರ ಬೂತ್‍ಗಳಲ್ಲಿ ಮುನ್ನಡೆ ಸಾಧಿಸಿ ತೋರಿಸುತ್ತೇವೆ: ಬಿ.ಎಲ್.ಸಂತೋಷ್

Update: 2023-05-14 18:48 IST

ಬೆಂಗಳೂರು, ಮೇ 14: ‘ನಾವು ಗೆಲ್ಲಲಿಕ್ಕೆ ಬಂದವರು, ನಮಗೆ ಸೋಲು ಕ್ಷಣಿಕ, ಮುನ್ನಡೆ ಸತತ’ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಪ್ರತಿಕ್ರಿಯೆ ನೀಡಿದ್ದಾರೆ.

ರವಿವಾರ ವಿಧಾನಸಭೆ ಚುನಾವಣೆ ಫಲಿತಾಂಶದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, ‘ಕಲಿಯುತ್ತೇವೆ ಸೋಲಿನಿಂದ, ಹಿನ್ನಡೆಗಳಿಂದ, ತಪ್ಪುಗಳಿಂದ, ಉತ್ತರಿಸುತ್ತೇವೆ ಟೀಕೆಗಳಿಗೆ, ಕುಹಕಗಳಿಗೆ, ಒಡಕು ಮಾತುಗಳಿಗೆ ನಮ್ಮ ಗತಿಶೀಲತೆಯಿಂದ. ನಾವು ಇರಲಿಕ್ಕೆ ಬಂದವರು’ ಎಂದು ಹೇಳಿದ್ದಾರೆ.

ಮುಂದುವರಿದು, ‘ಗೆಲ್ಲಲಿಕ್ಕೇ ಬಂದವರು, ನಮಗೆ ಸೋಲು ಕ್ಷಣಿಕ, ಮುನ್ನಡೆ ಸತತ... ಇನ್ನೂ 12 ತಿಂಗಳಿನೊಳಗೆ 31ಸಾವಿರಕ್ಕೆ ಮತ್ತೆ 10ಸಾವಿರ ಸೇರಿಸಿ 41ಸಾವಿರ ಬೂತ್‍ಗಳಲ್ಲಿ ಮುನ್ನಡೆ ಸಾಧಿಸಿ ತೋರಿಸುತ್ತೇವೆ’ ಎಂದು ಬಿ.ಎಲ್.ಸಂತೋಷ್ ಬರೆದುಕೊಂಡಿದ್ದಾರೆ.

ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಆಯ್ಕೆ, ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಜೆ.ಪಿ.ನಡ್ಡಾರ ಪ್ರಚಾರ, ರೋಡ್ ಶೋ ಸೇರಿದಂತೆ ಎಲ್ಲ ವಿಚಾರಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬಿ.ಎಲ್.ಸಂತೋಷ್ ವಿರುದ್ಧ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಅವರು ಮೇಲಿನಂತೆ ಪ್ರತಿಕ್ರಿಯೆ ನೀಡಿದ್ದಾರೆ.

'ಬಿಎಲ್‌ ಸಂತೋಷ್‌ ಅವರೇ, ಸೌಖ್ಯವೇ, ಸಂತೋಷವೇ?! ಅಂದಹಾಗೆ ತಾವು ಹೇಳಿದ 31,000 ಬೂತ್‌ಗಳು ಯಾವವು? STD ಬೂತ್‌ಗಳಾ?' ಎಂದು ಕಾಂಗ್ರೆಸ್‌ ವ್ಯಂಗ್ಯವಾಡಿತ್ತು.

Full View

Similar News