×
Ad

ಚುನಾವಣೆಯಲ್ಲಿ ಸೋತ ಸುಧಾಕರ್ ರನ್ನು ಭೇಟಿಯಾಗಿ ಧೈರ್ಯ ತುಂಬಿದ್ದೇನೆ: ಹಂಗಾಮಿ ಸಿಎಂ ಬೊಮ್ಮಾಯಿ‌

Update: 2023-05-16 12:32 IST

ಬೆಂಗಳೂರು: ಚುನಾವಣೆಯಲ್ಲಿ ಸೋಲು ಏಕೆ ಆಯ್ತು, ಏನು ಆಯ್ತು ಎಂದು ನಾವು ಪರಾಮರ್ಶೆ ಮಾಡಿದ್ದೇವೆ ಎಂದು ಹಂಗಾಮಿ ಸಿಎಂ ಬಸವರಾಜ ಬೊಮ್ಮಾಯಿ‌ ಹೇಳಿದರು.

ಇಂದು ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದ ಅವರು, ಇಂದು ಸುಧಾಕರ್ ಭೇಟಿ ಮಾಡಿದ್ದೀನಿ. ನಮ್ಮ ಜೊತೆ ಕೆಲಸ ಮಾಡಿದವರು ಅಲ್ಪ ಪ್ರಮಾಣದಲ್ಲಿ ಸೋತಿದ್ದಾರೆ. ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದೇನೆ. ಸೋಲಿನ ಕಾರಣದ ಬಗ್ಗೆ ಚರ್ಚೆ ಮಾಡಿದ್ದೇವೆ. ಸೋಮಣ್ಣ ಅವರನ್ನೂ ಭೇಟಿ ಮಾಡುತ್ತೇನೆ ಎಂದರು.

ಕಾಂಗ್ರೆಸ್‌ನಲ್ಲಿ ಸಿಎಂ ಸ್ಥಾನ ಹಗ್ಗಜಗ್ಗಾಟ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ಅದು ಅವರ ಪಕ್ಷದ ವಿಚಾರ. ಸಿಎಂ ಯಾರು ಆಗುತ್ತಾರೆ ಎನ್ನುವುದನ್ನು ಕಾದು ನೋಡೊಣ ಎಂದರು.

ಡಿಜಿಪಿ ಪ್ರವೀಣ್ ಸೂದ್ ಸಿಬಿಐ ನಿರ್ದೇಶಕರಾಗಿರುವ ವಿಚಾರ ಪ್ರತಿಕ್ರಿಯಿಸಿ ಅವರು, ಪ್ರವೀಣ್ ಸೂದ್ ನಿರ್ದೇಶಕರನ್ನಾಗಿ ಮಾಡಿರುವುದು ಕೇಂದ್ರ ಸರ್ಕಾರದ ನಿರ್ಧಾರ. ಆಲ್ ಇಂಡಿಯಾ ಸರ್ವೀಸ್ ಇರುವುದರಿಂದ ಅವರು ಮಾಡಿದ್ದಾರೆ ಎಂದರು.

Similar News