×
Ad

ಡಿ.ಕೆ ಶಿವಕುಮಾರ್ ಮೇಲೆ ದ್ವೇಷ ಸಾಧಿಸಲು ಸಿಬಿಐ ನಿರ್ದೇಶಕರಾಗಿ ಪ್ರವೀಣ್ ಸೂದ್ ನೇಮಕ: ಶಾಸಕ ಕೆ.ಎನ್ ರಾಜಣ್ಣ ಆರೋಪ

Update: 2023-05-16 13:27 IST

ಬೆಂಗಳೂರು:  ಡಿ.ಕೆ ಶಿವಕುಮಾರ್ ಮೇಲೆ ದ್ವೇಷ ಸಾಧಿಸುವ ಉದ್ದೇಶದಿಂದ ಡಿಜಿಪಿ ಪ್ರವಿಣ್ ಸೂದ್ ರನ್ನು ಸಿಬಿಐಗೆ  ನೇಮಿಸಿದ್ದಾರೆ' ಎಂದು ಮಧುಗಿರಿ ಶಾಸಕ ಕೆ.ಎನ್ ರಾಜಣ್ಣ ಆರೋಪಿಸಿದ್ದಾರೆ. 

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಡಿ.ಕೆ ಶಿವಕುಮಾರ್ ಪ್ರವಿಣ್ ಸೂದ್ ರನ್ನ ಬೈದಿದ್ದರು. ಈಗ ಪ್ರವೀಣ್ ಸೂದ್ ರನ್ನೇ ಸಿಬಿಐ ನಿರ್ದೇಶಕರಾಗಿ ನೇಮಿಸಿದ್ದಾರೆ. ಶಿವಕುಮಾರ್ ಮೇಲೆ ದ್ವೇಷ ಸಾಧಿಸಲು ಹಾಗೆ ಮಾಡಿದ್ದಾರೆ' ಎಂದು ಆಪಾದಿಸಿದರು.

'ಹೆದರಿಸುವುದು, ಬ್ಲಾಕ್ ಮೇಲ್ ರಾಜಕಾರಣ ಮಾಡುವುದು ಅವರ (ಬಿಜೆಪಿ) ಕೆಲಸ ಎಂದ ಅವರು, ಮಧುಗಿರಿ ಜಿಲ್ಲೆ ಮಾಡಲು ಪ್ರಯತ್ನ ಮಾಡಲಾಗುವುದು. ನಾನು ಹೇಳಿದಂತೆ ನಡೆಯುವವನು. ಮಧುಗಿರಿ ಜಿಲ್ಲೆ ಆಗಲಿದೆ' ಎಂದು ತಿಳಿಸಿದರು.

Similar News