×
Ad

ವಾಲ್ಮೀಕಿ ಸಮುದಾಯಕ್ಕೆ ಒಂದು ಡಿಸಿಎಂ, 3 ಸಚಿವ ಸ್ಥಾನ ನೀಡುವಂತೆ ಆಗ್ರಹ

Update: 2023-05-17 20:49 IST

ಬೆಂಗಳೂರು, ಮೇ. 17: ವಾಲ್ಮೀಕಿ ನಾಯಕ ಸಮುದಾಯದ 15 ಮಂದಿ ಶಾಸಕರು ಪಕ್ಷದಿಂದ ಚುನಾಯಿತರಾಗಿರುವ ನಿಟ್ಟಿನಲ್ಲಿ ಒಬ್ಬರಿಗೆ ಡಿಸಿಎಂ, ಮೂವರಿಗೆ ಸಚಿವ ಸ್ಥಾನ ನೀಡುವಂತೆ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಆಗ್ರಹಿಸಿದೆ.

ಬುಧವಾರ ಪ್ರೆಸ್‍ಕ್ಲಬ್‍ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಹಾಸಭಾದ ರಾಜ್ಯಾಧ್ಯಕ್ಷ ಡಾ. ಕೆಂಪರಾಮಯ್ಯ, ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು 135 ಸ್ಥಾನಗಳನ್ನು ಗಳಿಸಿರುವ ನಿಟ್ಟಿನಲ್ಲಿ ನೂತನ ಸಂಪುಟದಲ್ಲಿ ವಾಲ್ಮೀಕಿ ಸಮಾಜದ ಸತೀಶ ಜಾರಕಿಹೊಳಿಗೆ ಉಪಮುಖ್ಯಮಂತ್ರಿಯಾಗಿ ಇನ್ನುಳಿದ ಮೂವರು ಶಾಸಕರುಗಳಿಗೆ ಸಚಿವ ಸ್ಥಾನ ಕೊಟ್ಟು, ರಾಜ್ಯದ ಜನರಿಗೆ ಸೇವೆ ಮಾಡಲು ಅವಕಾಶ ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿದರು.

ನಮ್ಮ ಸಮುದಾಯವು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ರಾಜಕೀಯವಾಗಿ ಹಿಂದುಳಿದಿರುವ ಸಮಾಜವಾಗಿದೆ ಆದುದರಿಂದ ಹಿಂದುಳಿದ ಸಮಾಜದ ಅಭಿವೃದ್ಧಿಗೆ ರಾಜಕೀಯ ಪ್ರಾತಿನಿಧ್ಯ ನೀಡಬೇಕು ಎಂದು ಡಾ.ಕೆಂಪರಾಮಯ್ಯ  ಆಗ್ರಹಿಸಿದರು. ಪತ್ರಿಕಾಗೋಷ್ಠಿಯಲ್ಲಿ ಡಾ.ಗೋಪಾಲಕೃಷ್ಣ ಆರ್., ಅನಂತಯ್ಯ ತುಮಕೂರು, ರಾಜಶೇಖರ ತಳವಾರ, ಜಯಶ್ರೀ ಇದ್ದರು.

Similar News