ಬೈಯಪ್ಪನಹಳ್ಳಿ-ಕೆ.ಆರ್.ಪುರ ಮೆಟ್ರೋ ನಿಲ್ದಾಣ ಶೀಘ್ರ ಆರಂಭ

Update: 2023-05-17 16:53 GMT

ಬೆಂಗಳೂರು, ಮೇ 17: ಬೈಯಪ್ಪನಹಳ್ಳಿ-ಕೆ.ಆರ್.ಪುರ ಮೆಟ್ರೋ ನಿಲ್ದಾಣ(2 ಕಿಮೀ) ಜು.15ರಿಂದ ಕಾರ್ಯಾರಂಭವಾಗಲಿದೆ. 

ಸದ್ಯ ಮೆಟ್ರೋ ಪ್ರಯಾಣಿಕರು ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಇಳಿದು ಫೀಡರ್ ಬಸ್‍ಗಳಲ್ಲಿ ಕೆ.ಆರ್.ಪುರ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ವೈಟ್‍ಫೀಲ್ಡ್‍ಗೆ ಮೆಟ್ರೋ ರೈಲಿನಲ್ಲಿ ಪ್ರಯಾಣ ಬೆಳೆಸುತ್ತಿದ್ದಾರೆ. 

ಬೈಯಪ್ಪನಹಳ್ಳಿ-ಕೆ.ಆರ್.ಪುರ ನಡುವೆ ಸಂಪರ್ಕ ಕಲ್ಪಿಸುವ ಮೆಟ್ರೋ ನಿಲ್ದಾಣ ಕಾರ್ಯಾರಂಭವಾದರೆ ಕೆಂಗೇರಿಯಿಂದ ವೈಟ್‍ಫೀಲ್ಡ್‍ಗೆ(41 ಕಿ.ಮೀ) 50 ರಿಂದ 55 ನಿಮಿಷದಲ್ಲಿ ಪ್ರಯಾಣ ಮಾಡಬಹುದಾಗಿದೆ. ಬೈಯಪ್ಪನಹಳ್ಳಿ ನಿಲ್ದಾಣದಿಂದ ಜ್ಯೋತಿಪುರವರೆಗೂ(ಬೆನ್ನಿಗಾನಹಳ್ಳಿ) ಟ್ರ್ಯಾಕ್ ಅಳವಡಿಸುವ ಕೆಲಸ ಸಾಗಿದೆ ಎಂದು ಬಿಎಂಆರ್‍ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ. 

Similar News