×
Ad

ಉದ್ಯಮಿ ಅಪಹರಣಕ್ಕೆ ಯತ್ನ

Update: 2023-05-17 22:36 IST

ಬೆಂಗಳೂರು, ಮೇ 17: ಉದ್ಯಮಿ ಅಖಿಲ್ ಯಾದವ್ ಎಂಬುವರನ್ನು ಅಪಹರಣ ಮಾಡಲು ಪ್ರಯತ್ನಿಸಿರುವ ಘಟನೆವೊಂದು ವರದಿಯಾಗಿದ್ದು, ಈ ಸಂಬಂಧ ಕೊಡಿಗೆಹಳ್ಳಿ ಪೊಲೀಸ್ ಠಾಣಾ ವಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ನಗರದ ಬಳ್ಳಾರಿ ರಸ್ತೆಯಲ್ಲಿರುವ ಅಪಾರ್ಟ್‍ಮೆಂಟ್ ಮುಂಭಾಗದಲ್ಲಿ ದುರ್ಗಾ ಯಾನೆ ಸಹನಾ ಎಂಬಾಕೆಯ ತಂಡದ ಸದಸ್ಯರು ದಾಳಿ ನಡೆಸಿ ಉದ್ಯಮಿಯ ಕಾರು ಜಖಂಗೊಳಿಸಿದ್ದಾರೆ. ಆನಂತರ, ಆತನನ್ನು ಅಪಹರಣ ಮಾಡಲು ಯತ್ನಿಸಿದ್ದು, ಈ ದೃಶ್ಯಗಳು ಮೊಬೈಲ್‍ನಲ್ಲಿ ಸೆರೆ ಹಿಡಿಯಲಾಗಿದೆ.

ಹಳೆಯ ವೈಷಮ್ಯದಿಂದ ಸಹನಾ, ಅಮೋದ್ ಮತ್ತು ತರುಣ್ ಹಲ್ಲೆ ನಡೆಸಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಈ ಕುರಿತು ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Similar News