×
Ad

ಬೆಂಗಳೂರು | ಹೆಲ್ಮೆಟ್ ಧರಿಸದ ಪಿಎಸ್ಐ ಫೋಟೊ ವೈರಲ್; ಪ್ರಕರಣ ದಾಖಲು, ದಂಡ ವಿಧಿಸಿದ ಪೊಲೀಸರು

Update: 2023-05-18 18:34 IST

ಬೆಂಗಳೂರು, ಮೇ 18: ಪೊಲೀಸರೇ ಸಂಚಾರ ನಿಯಮ ಉಲ್ಲಂಘಿಸಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಈ ಸಂಬಂಧ ಮಹಿಳಾ ಪಿಎಸ್‍ಐ ಒಬ್ಬರಮೇಲೆ ದೂರು ದಾಖಲಿಸಿ ದಂಡ ವಿಧಿಸಲಾಗಿದೆ.

ದ್ವಿಚಕ್ರ ವಾಹನದಲ್ಲಿ ಹಿಂಬದಿ ಸವಾರರಾಗಿ ಸಂಚರಿಸುತ್ತಿದ್ದ ಮಹಿಳಾ ಸಬ್‍ ಇನ್‍ಸ್ಟೆಕ್ಟರ್ ಒಬ್ಬರು ಹೆಲ್ಮೆಟ್ ಧರಿಸದೆ ಇರುವುದನ್ನು ಗಮನಿಸಿದ್ದ ವ್ಯಕ್ತಿಯೊಬ್ಬರು ಅದರ ಪೋಟೋ ಹಾಗೂ ವಿಡಿಯೊ ಸಮೇತ ಟ್ವೀಟ್ ಮಾಡಿದ್ದರು. ಅಲ್ಲದೆ, ಸ್ವಿಗ್ಗಿ, ಜೊಮಾಟೋ, ಕೊರಿಯರ್ ಹುಡುಗರನ್ನು ಅಡ್ಡಗಟ್ಟುವ ನಗರ ಸಂಚಾರ ಪೊಲೀಸರಿಗೆ ಇವರೇಕೆ ಕಾಣುತ್ತಿಲ್ಲ? ಎಂದೂ ಪ್ರಶ್ನಿಸಿದ್ದರು.

ಡಿಜಿಪಿ, ಬೆಂಗಳೂರು ಸಂಚಾರ ಪೊಲೀಸ್ ಹಾಗೂ ಕಬ್ಬನ್ ಪಾರ್ಕ್ ಸಂಚಾರ ಪೊಲೀಸರನ್ನು ಉಲ್ಲೇಖಿಸಿದ್ದರು. ಆನಂತರ, ಕಬ್ಬನ್ ಪಾರ್ಕ್ ಸಂಚಾರ ಪೊಲೀಸರು ಸಂಬಂಧಿತ ಮಹಿಳಾ ಪಿಎಸ್‍ಐ ವಿರುದ್ಧ ಪ್ರಕರಣ ದಾಖಲಿಸಿ ದಂಡ ವಿಧಿಸಿದ್ದಾರೆ.

Similar News