×
Ad

ಸ್ಕೂಟರ್ ಕಳವು

Update: 2023-05-18 20:51 IST

ಮಂಗಳೂರು, ಮೇ 18: ನಗರದ ಬಂದರ್ ದಕ್ಕೆಯ ಕಸಬ ಫೆರಿಯಲ್ಲಿ ನಿಲ್ಲಿಸಿದ್ದ ಮುಹಮ್ಮದ್ ನೌಶಾದ್‌ರ ಸ್ಕೂಟರ್ ಕಳವಾಗಿರುವ ಬಗ್ಗೆ ಬಂದರ್ ಠಾಣೆಯಲ್ಲಿ ದೂರು ದಾಖಲಾಗಿದೆ.

ದಕ್ಕೆಯಲ್ಲಿ ಬೇಕರಿಯೊಂದನ್ನು ನಡೆಸುತ್ತಿರುವ ಮುಹಮ್ಮದ್ ನೌಶಾದ್ ಮೇ 12ರಂದು ರಾತ್ರಿ 10:30ಕ್ಕೆ ಫೆರಿಯಲ್ಲಿ ಸ್ಕೂಟರ್ ಪಾರ್ಕ್ ಮಾಡಿದ್ದರು. ಮೇ 13ರಂದು  ಬೆಳಗ್ಗೆ 10:30ಕ್ಕೆ ಸ್ಥಳಕ್ಕೆ ಬಂದಾಗ ಪಾರ್ಕ್ ಮಾಡಲಾಗಿದ್ದ ಸ್ಕೂಟರನ್ನು ಕಳವು ಮಾಡಲಾಗಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ.

2016ನೇ ಮಾಡೆಲ್‌ನ ಬಿಳಿ ಬಣ್ಣದ ಹೋಂಡಾ ಆ್ಯಕ್ಟಿವಾ ಸ್ಕೂಟರ್ ಇದಾಗಿದ್ದು, ಮೂಲ ದಾಖಲೆಗಳು ಕೂಡಾ ಅದರಲ್ಲೇ ಇತ್ತು. ಸ್ಕೂಟರ್‌ನ ಅಂದಾಜು ಮೌಲ್ಯ 20 ಸಾವಿರ ರೂ. ಆಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Similar News