ಬೆಂಗಳೂರು | ಬೀದಿ ನಾಯಿಗಳಿಗೆ ಊಟ ಹಾಕಿದ್ದಕ್ಕೆ ಹಲ್ಲೆ, ಜೀವ ಬೆದರಿಕೆ ಆರೋಪ: ದೂರು ದಾಖಲು
Update: 2023-05-18 21:21 IST
ಬೆಂಗಳೂರು, ಮೇ 18: ಬೀದಿ ನಾಯಿಗಳಿಗೆ ಊಟ ಹಾಕುವ ವಿಚಾರಕ್ಕೆ ಗಲಾಟೆ ನಡೆದಿದ್ದು, ಈ ಸಂಬಂಧ ಚಂದ್ರಾಲೇಔಟ್ ಠಾಣಾ ವ್ಯಾಪ್ತಿಯಲ್ಲಿ ದೂರು ದಾಖಲಾಗಿದೆ.
ಕೊಕೊನಟ್ ಗಾರ್ಡನ್‍ನಲ್ಲಿ ಐಶ್ವರ್ಯ ಎಂಬುವರು ನಿತ್ಯ ಬೀದಿ ನಾಯಿಗಳಿಗೆ ಊಟ ಹಾಕುತ್ತಿದ್ದು, ತನಗೆ ಹುಷಾರಿಲ್ಲದ ಕಾರಣ ನಾಯಿಗಳಿಗೆ ಊಟ ಹಾಕುವಂತೆ ನಾಲ್ಕು ದಿನಗಳ ಹಿಂದೆ ಸ್ನೇಹಿತೆ ಯಮುನಾಗೆ ಹೇಳಿದ್ದರು.
ಆದರೆ, ಯಮುನಾ, ನಾಯಿಗಳಿಗೆ ಊಟ ಹಾಕುತ್ತಿದ್ದಂತೆ ಸ್ಥಳೀಯರಾದ ನಂದನ್, ಲಕ್ಷ್ಮಿ ಎಂಬುವವರು ಸೇರಿದಂತೆ ನಾಲ್ವರು ಬಂದು ಅವಾಚ್ಯವಾಗಿ ನಿಂದಿಸಿ, ಹಲ್ಲೆ ಮಾಡಿ ತನಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.