ಕಡಿಮೆ ಹಾಜರಾತಿಯಿಂದ ಪಿಯು ಪರೀಕ್ಷೆಗೆ ಗೈರು; ಖಾಸಗಿ ಅಭ್ಯರ್ಥಿಗಳಾಗಿ ಪೂರಕ ಪರೀಕ್ಷೆ ಬರೆಯಲು ಅವಕಾಶ

Update: 2023-05-18 17:40 GMT

ಬೆಂಗಳೂರು, ಮೇ 18: ಮಾರ್ಚ್ 2023ರಲ್ಲಿ ನಡೆದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ಹಾಜರಾತಿ ಕೊರತೆಯಿಂದ ಪರೀಕ್ಷೆ ಬರೆಯಲು ಅವಕಾಶವಿಲ್ಲದಿದ್ದ ವಿದ್ಯಾರ್ಥಿಗಳು ಮೇ/ಜೂನ್-2023ರ ಪೂರಕ ಪರೀಕ್ಷೆಗೆ ಖಾಸಗಿ ಅಭ್ಯರ್ಥಿಗಳಾಗಿ ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಿದ್ದು, ನೋಂದಣಿಗೆ ಮೇ 20ರ ವರೆಗೆ ಅವಕಾಶ ಕಲ್ಪಿಸಲಾಗಿದೆ.

2022-23ನೆ ಸಾಲಿನಲ್ಲಿ ದ್ವಿತೀಯ ಪಿಯುಸಿ ಕಲಾ ಮತ್ತು ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ಮಾಡಿದ್ದು, ಹಾಜರಾತಿ ಕೊರತೆಯಿಂದ 7,985 ಕಲಾ ವಿಭಾಗದ ವಿದ್ಯಾರ್ಥಿಗಳು ಹಾಗೂ ವಾಣಿಜ್ಯ ವಿಭಾಗದ 4,400 ವಿದ್ಯಾರ್ಥಿಗಳು ಸೇರಿ ಒಟ್ಟು 12,385 ವಿದ್ಯಾರ್ಥಿಗಳು ಮಾರ್ಚ್‍ನಲ್ಲಿ ನಡೆದ ವಾರ್ಷಿಕ ಪರೀಕ್ಷೆಯನ್ನು ಬರೆದಿರಲಿಲ್ಲ.

ಹಾಗಾಗಿ ಈ ವಿದ್ಯಾರ್ಥಿಗಳಿಗೆ ಖಾಸಗಿ ಅಭ್ಯರ್ಥಿಗಳಾಗಿ ನೋಂದಣಿ ಮಾಡಿಕೊಳ್ಳಲು ಅವಕಾಶವನ್ನು ಕಲ್ಪಿಸಲಾಗಿದೆ. ಅಭ್ಯರ್ಥಿಗಳು ನೋಂದಣಿ ಶುಲ್ಕವಾಗಿ 60 ರೂ.ಗಳನ್ನು, ದಾಖಲಾತಿ ಶುಲ್ಕವಾಗಿ 400 ರೂ., ಕಾಲೇಜು ಅಭಿವೃದ್ಧಿ ಶುಲ್ಕವಾಗಿ 1,020 ರೂ. ಹಾಗೂ ಅಂಕಪಟ್ಟಿ ಶುಲ್ಕವಾಗಿ 80ರೂ. ಪರೀಕ್ಷಾ ಶುಲ್ಕವಾಗಿ 400 ರೂ.ಗಳನ್ನು ಸೇರಿ ಒಟ್ಟು 1,960 ರೂ.ಶುಲ್ಕವನ್ನು ಪಾವತಿ ಮಾಡಬೇಕು. ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ 400 ರೂ.ವಿನಾಯಿತಿ ನೀಡಲಾಗಿದ್ದು, ಒಟ್ಟು 1,560 ರೂ.ಗಳ ಶುಲ್ಕವನ್ನು ಕಟ್ಟಿಸಿಕೊಳ್ಳವಂತೆ ತಿಳಿಸಲಾಗಿದೆ.  

Similar News