ಶಿರ್ವ: ‘ಬಹುಮುಖಿ -ವಸಂತ ಕಲಾಸೌರಭ’ ಸಾಂಸ್ಕೃತಿಕ ಉತ್ಸವಕ್ಕೆ ಚಾಲನೆ

Update: 2023-05-19 12:34 GMT

ಶಿರ್ವ: ಪಾಂಬೂರು ಪರಿಚಯ ಪ್ರತಿಷ್ಠಾನದ ವತಿಯಿಂದ ಪರಿಚಯ ವೇದಿಕೆಯಲ್ಲಿ ಹಮ್ಮಿಕೊಳ್ಳಲಾದ ಬಹುಮುಖಿ ವಸಂತ ಕಲಾ ಸೌರಭ ಸಾಂಸ್ಕೃತಿಕ ಉತ್ಸವಕ್ಕೆ ಬುಧವಾರ ಚಾಲನೆ ನೀಡಲಾಯಿತು.

ಕೊಂಕಣಿಯ ಸಾಹಿತಿ ಹಾಗೂ ಕವಿ, ಕೇಂದ್ರ ಸಾಹಿತ್ಯ ಅಕಾಡೆಮಿಯ ಕೊಂಕಣಿ ಭಾಷಾ ಸಂಚಾಲಕ ಮೆಲ್ವಿನ್ ರೊಡ್ರಿಗಸ್ರವರನ್ನು ಉಡುಪಿ ಕೆಥೊಲಿಕ್ ಧರ್ಮಪ್ರಾಂತ್ಯದ ಪ್ರಧಾನ ಧರ್ಮಗುರು ಮೊನ್ಸಿಂಜೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಮೆಲ್ವಿನ್ರ ಪತ್ನಿ ಆವೆರಿಲ್ ರೊಡ್ರಿಗಸ್ ವೇದಿಕೆಯಲ್ಲಿದ್ದರು. ಸಂಸ್ಥೆಯ ಆಡಳಿತ ಟ್ರಸ್ಟಿ ಡಾ.ವಿನ್ಸೆಂಟ್ ಆಳ್ವ ಸನ್ಮಾನಪತ್ರ ವಾಚನ ಮಾಡಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಡೈಯ್ಜಿವರ್ಲ್ಡ್ ಮೀಡಿಯ ಸಂಸ್ಥೆಯ ಆಡಳಿತ ನಿರ್ದೇಶಕ ವಾಲ್ಟರ್ ನಂದಳಿಕೆ ಮಾತನಾಡಿದರು. ಪಾಂಬೂರು ಚರ್ಚ್ನ ಪ್ರಧಾನ ಧರ್ಮಗುರು ರೆ.ಫಾ.ಹೆನ್ರಿ ಮಸ್ಕರೇನ್ಹಸ್ ಆಶೀರ್ವಚನ ನೀಡಿದರು. ರೆ.ಫಾ.ಡೇನಿಸ್ ಡೇಸಾ ಉಪಸ್ಥಿತರಿದ್ದರು. ಸಂಸ್ಥೆಯ ಕಾರ್ಯದರ್ಶಿ ಪ್ರಕಾಶ್ ನೊರೋನ್ಹಾ ಕಾರ್ಯಕ್ರಮ ಸಂಯೋಜಿಸಿದರು. ಕವಿ ಟೈಟಾಸ್ ನೊರೋನ್ಹಾ ತಾಕೋಡೆ, ರಿಕಿತಾ ಸಲ್ಡಾನ್ಹಾ ಬಂಟಕಲ್ಲು, ಎಲ್ಡನ್ ಡಿಸೋಜ ಕವನವಾಚನ ಮಾಡಿದರು.

ಸಿತಾರ್ ಕಲಾವಿದ ಉಸ್ತಾದ್ ರಫೀಕ್ ಖಾನ್ರವರ ಸಂಗೀತ ನಿರ್ದೇಶನ ದಲ್ಲಿ ಕಲಾವಿದರಿಂದ ಮೆಲ್ವಿನ್ ರೊಡ್ರಿಗಸ್ರವರ ಕವಿತೆಗಳಿಗೆ ಗಾಯನ, ಕಥಾ ಪ್ರಸ್ತುತಿಯ ಕವಿತಾ ರಂಗ್ ಕಾರ್ಯಕ್ರಮ ಜರಗಿತು. ಸಂಸ್ಥೆಯ ಅಧ್ಯಕ್ಷ ಅನಿಲ್ ಡೇಸಾ ಶಂಕರಪುರ ವಂದಿಸಿದರು.

Similar News