ದಂತ ವೈದ್ಯಕೀಯದಲ್ಲಿ ಒಟ್ಟು ನಾಲ್ಕು ರ‍್ಯಾಂಕ್ ಪಡೆದ ಬೆಳ್ತಂಗಡಿಯ ಡಾ|ಹಮ್ನಾ ಜಝೀಲಾ
ಬೆಳ್ತಂಗಡಿ: ಕಳೆದ ಸಾಲಿನ ದಂತ ವೈದ್ಯಕೀಯದ ಅಂತಿಮ ವರ್ಷದ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ತೋರಿದ ಬೆಳ್ತಂಗಡಿಯ ಡಾ. ಹಮ್ನಾ ಜಝೀಲಾ, ರಾಜೀವ್ ಗಾಂಧಿ ವಿಶ್ವವಿದ್ಯಾಲಯದಿಂದ ನಾಲ್ಕು ರ‍್ಯಾಂಕ್ ಗಳನ್ನು ಪಡೆದು ಬೆಳ್ತಂಗಡಿಗೆ ಕೀರ್ತಿ ತಂದಿರುತ್ತಾರೆ.
ಪಬ್ಲಿಕ್ ಹೆಲ್ತ್ ಡೆಂಟಿಸ್ಟ್ರಿ, ಫಿಸಿಯೋಲಜಿ ಮತ್ತು ಬಯೋಕೆಮೆಸ್ಟ್ರಿ, ಡೆಂಟಲ್ ಮೆಟೇರಿಯಲ್ಸ್ ಹಾಗೂ ಕ್ಲಿನಿಕಲ್ ಪ್ರೊಸ್ಟೋಡೆಂಟಿಕ್ಸ್ ಈ ನಾಲ್ಕು ವಿಷಯಗಳಲ್ಲಿ ಪ್ರತ್ಯೇಕವಾಗಿ ರ‍್ಯಾಂಕ್ ಪಡೆದಿರುವ ಇವರು ಎಂ.ಡಿ.ಎಸ್.ಕೋರ್ಸ್ ಮಾಡುವ ಇಚ್ಛೆ ವ್ಯಕ್ತಪಡಿಸಿರುತ್ತಾರೆ.
ಲಾಯಿಲ ಸೈಂಟ್ ಮೇರೀಸ್ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿನಿಯಾಗಿರುವ ಇವರು ಮೂಡಬಿದ್ರೆಯ ಎಕ್ಸೆಲೆಂಟ್ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ ಪಡೆದಿರುತ್ತಾರೆ. ಶ್ರೀ ರಾಜರಾಜೇಶ್ವರಿ ದಂತ ವೈದ್ಯಕೀಯ ಕಾಲೇಜು, ಕೆಂಗೇರಿ, ಬೆಂಗಳೂರು ಇಲ್ಲಿ ತನ್ನ ದಂತ ವೈದ್ಯಕೀಯ ಕೋರ್ಸ್ ಮುಗಿಸಿರುವ ಇವರು ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಯಾಕೂಬ್ ಕೊಯ್ಯೂರು ಹಾಗೂ ಜಮೀಲಾ ಎಸ್ ದಂಪತಿ ಪುತ್ರಿ.