×
Ad

ಬೆಳ್ತಂಗಡಿ: ಬೆಂಕಿಗಾಹುತಿಯಾದ ಸೂಪರ್ ಮಾರ್ಕೆಟ್; ಲಕ್ಷಾಂತರ ರೂ. ನಷ್ಟ

Update: 2023-05-21 10:42 IST

ಬೆಳ್ತಂಗಡಿ:  ಮುಂಡಾಜೆಯಲ್ಲಿ ಸೂಪರ್ ಮಾರ್ಕೆಟ್ ಒಂದರಲ್ಲಿ ಇಂದು ಬೆಳಗ್ಗಿನ ಜಾವ ಆಕಸ್ಮಿಕ ಅಗ್ನಿ ದುಂತ ಸಂಭವಿಸಿದ್ದು ಲಕ್ಷಾಂತರ ನಷ್ಟ ಸಂಭವಿಸಿದೆ.

ರಾಷ್ಟ್ರೀಯ ಹೆದ್ದಾರಿಯ ಸಮೀಪವಿರುವ ಬಿ.ಎಂ ಹಂಝ ಎಂಬವರ ಮಾಲಕತ್ವದ ಸೂಪರ್ ಮಾರ್ಕೆಟ್ ನಲ್ಲಿ ಬೆಳಗ್ಗೆ ಐದು ಗಂಟೆಯ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ.

ಬೆಂಕಿ ಹೊತ್ತಿಕೊಳ್ಳಲು ಕಾರಣವೇನು ಎಂಬುವುದು ಇನ್ಬಷ್ಟೇ ತಿಳಿದು ಬರಬೇಕಾಗಿದೆ. ಸ್ಥಳೀಯರ ಸಹಕಾರದೊಂದಿಗೆ ಅಗ್ನಿ ಶಾಮಕ ದಳ ಬೆಂಕಿ ನಂದಿಸುವಷ್ಟರಲ್ಲಿ ಅಂಗಡಿ ಸಂಪೂರ್ಣವಾಗಿ ಸುಟ್ಟು ಹೋಗಿದೆ.

Similar News