ಕುದ್ರೋಳಿ| ಸಿದ್ದರಾಮಯ್ಯ ನೇತೃತ್ವದ ಸರಕಾರ ಅಸ್ತಿತ್ವಕ್ಕೆ; ಕಾಂಗ್ರೆಸ್ ವಿಜಯೋತ್ಸವ
Update: 2023-05-21 13:37 IST
ಮಂಗಳೂರು: ಮೇ 21: ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದ ಹಿನ್ನೆಲೆಯಲ್ಲಿ ಕುದ್ರೋಳಿ ವಾರ್ಡ್ ಕಾಂಗ್ರೆಸ್ ಸಮಿತಿಯ ವತಿಯಿಂದ ಕುದ್ರೋಳಿಯಲ್ಲಿ ವಿಜಯೋತ್ಸವ ಆಚರಿಸಲಾಯಿತು.
ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ, ಪಕ್ಷದ ಹಿರಿಯ ಮುಖಂಡ ಅಲ್ಹಾಜ್ ಕೆಎಸ್ ಮುಹಮ್ಮದ್ ಮಸೂದ್ ನೇತೃತ್ವದಲ್ಲಿ ನಡೆದ ವಿಜಯೋತ್ಸವದಲ್ಲಿ ಕಾರ್ಪೊರೇಟರ್ ಸಂಶುದ್ದೀನ್ ಕುದ್ರೋಳಿ, ವಾರ್ಡ್ ಕಾಂಗ್ರೆಸ್ ಅಧ್ಯಕ್ಷ ಆಬಿದ್ ಜಲಿಹಾಲ್, ಡಿಸಿಸಿ ಸದಸ್ಯ ಎನ್.ಕೆ. ಅಬೂಬಕರ್, ಸಲೀಂ ಮನ್ನತ್, ವಹಾಬ್ ಕುದ್ರೋಳಿ, ಸತೀಶ್ ಪೆಂಗಲ್, ಆರಿಫ್ ಕುದ್ರೋಳಿ, ಅನ್ವರ್, ಮಕ್ಬೂಲ್ ಅಹ್ಮದ್, ಇಮ್ತಿಯಾಝ್ ಅಹ್ಮದ್ ಮತ್ತಿತರರು ಪಾಲ್ಗೊಂಡಿದ್ದರು.
ವಿಜಯೋತ್ಸವದ ಪ್ರಯುಕ್ತ ಕಂಡತ್‌ಪಳ್ಳಿಯಿಂದ ಆರಂಭಗೊಂಡ ರ್‍ಯಾಲಿಯು ಕುದ್ರೋಳಿ ಜಾಮಿಯಾ ಮಸ್ಜಿದ್, ಬರ್ಕೆ ರಸ್ತೆಯಾಗಿ ಬೊಕ್ಕಪಟ್ಣದಲ್ಲಿ ಕೊನೆಗೊಂಡಿತು.