ಯಾರೂ ವಿದ್ಯುತ್ ಬಿಲ್ ಕಟ್ಟಬೇಡಿ, ಮಹಿಳೆಯರು ಬಸ್ ಟಿಕೆಟ್ ತಗೊಬೇಡಿ: ಕೋಟ ಶ್ರೀನಿವಾಸ ಪೂಜಾರಿ

Update: 2023-05-22 13:05 GMT

ಬೆಂಗಳೂರು, ಮೇ 22: ‘ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ಭರವಸೆ ನೀಡಿದ್ದ ಐದು ಗ್ಯಾರೆಂಟಿ ಯೋಜನೆಗಳನ್ನು ಈಡೇರಿಸದಿದ್ದಲ್ಲಿ, ಬಿಜೆಪಿ ನ್ಯಾಯ ಕೊಡಿಸುವ ಪ್ರಯತ್ನ ಮಾಡಲಿದೆ’ ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಮುಖ್ಯಮಂತ್ರಿ ಸಿದ್ದರಾಮಯ್ಯರ ಮಾತಿನ ಮೇಲೆ ಭರವಸೆ ಇಟ್ಟು ರಾಜ್ಯದ ಜನರು 200 ಯುನಿಟ್ ವಿದ್ಯುತ್ ಬಿಲ್ ಕಟ್ಟಬೇಡಿ. ಅದಕ್ಕಿಂತ ಹೆಚ್ಚು ವ್ಯಯ ಮಾಡಿದರೆ ಬಿಲ್ ಕಟ್ಟಿ. ಹಾಗೆಯೆ ಮಹಿಳೆಯರು ಯಾರು ಸಾರಿಗೆ ಬಸ್ ಟಿಕೆಟ್ ಪಡೆದುಕೊಳ್ಳಬೇಡಿ. ನಿರುದ್ಯೋಗಿ ಯುವಕರಿಗೆ ಹಣ 3ಸಾವಿರ ರೂ. ನೀಡಬೇಕು. ಇಲ್ಲವಾದರೆ ಬಿಜೆಪಿ ಮುಂದೆ ನಿಂತು ನ್ಯಾಯ ಕೊಡಿಸುವ ಪ್ರಯತ್ನ ಮಾಡಲಿದೆ’ ಎಂದು ಹೇಳಿದರು.

ರಾಜ್ಯದ ಎಲ್ಲ ಫಲಾನುಭವಿಗಳು ಇದೆ ತಿಂಗಳಿನಿಂದ ಕಾಂಗ್ರೆಸ್‍ನ ಗ್ಯಾರಂಟಿ ಯೋಜನೆ ಪಡೆದುಕೊಳ್ಳಬೇಕು. ಒಂದು ವೇಳೆ ಸಿಗದೇ ಇದ್ದರೆ ನಾವು ಸೇರಿಕೊಂಡು ಅವರಿಗೆ ನ್ಯಾಯ ಓದಗಿಸುತ್ತೇವೆ. ಬೀದಿಗಿಳಿದು ಹೋರಾಟ ಮಾಡಿ ರಾಜ್ಯದ ಜನರಿಗೆ ನ್ಯಾಯ ಕೊಡಿಸುತ್ತೇವೆ ಎಂದು ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

Similar News