ಪರ್ಕಳ ರಾ.ಹೆದ್ದಾರಿ ಬದಿ ಅಪಾಯಕಾರಿ ಹೊಂಡ !
Update: 2023-05-22 18:51 IST
ಉಡುಪಿ, ಮೇ 22: ಪರ್ಕಳ ಕೆನರಾ ಬ್ಯಾಂಕಿನ ಎದುರು ರಾಷ್ಟ್ರೀಯ ಹೆದ್ದಾರಿಯ ಚರಂಡಿ ವ್ಯವಸ್ಥೆ ಕಾಮಗಾರಿ ಅರ್ಧದಲ್ಲಿಯೇ ಸ್ಥಗಿತಗೊಂಡಿದ್ದು, ಇದರಿಂದ ಬೃಹತ್ ಹೊಂಡ ಅಪಾಯಕ್ಕೆ ಆಹ್ವಾನ ನೀಡುವಂತಾಗಿದೆ.
ಇಲ್ಲಿನ ಬ್ಯಾಂಕ್‌ಗೆ ನೂರಾರು ಜನರು ನಿತ್ಯ ಕೆಲಸ ಕಾರ್ಯಗಳಿಗೆ ಬರುತ್ತಾರೆ. ಅಲ್ಲೇ ಪಕ್ಕದಲ್ಲಿರುವ ಈ ಹೊಂಡಕ್ಕೆ ಯಾವುದೇ ರಕ್ಷಣಾ ತಡೆಬೇಲಿ ಇಲ್ಲ. ರಾಷ್ಟ್ರೀಯ ಹೆದ್ದಾರಿಯ ಮಗ್ಗುಲಲ್ಲಿ ಈ ಬ್ಯಾಂಕ್ ಇರುವುದರಿಂದ ಈ ಹೊಂಡ ಸಾಕಷ್ಟು ಅಪಾಯಕಾರಿಯಾಗಿ ಕಾಣುತ್ತಿದೆ.
ಚರಂಡಿ ಸಂಪೂರ್ಣ ಕಾಮಗಾರಿ ನಡೆಸದೆ ಅರ್ಧದಲ್ಲಿ ಬಿಟ್ಟು ಹೋಗಿರುವುದ ರಿಂದ ಈ ಸಮಸ್ಯೆ ಎದುರಾಗಿದೆ. ಆದುದರಿಂದ ಸಂಬಂಧಪಟ್ಟವರು ತಕ್ಷಣ ಈ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.