×
Ad

ವಿಧಾನಸಭೆ ಅಧಿವೇಶನ: ಎತ್ತಿನಗಾಡಿಯಲ್ಲಿ ಆಗಮಿಸಿ ಗಮನ ಸೆಳೆದ ನೂತನ ಶಾಸಕ ರವಿ ಗಣಿಗ

Update: 2023-05-22 21:25 IST

ಬೆಂಗಳೂರು, ಮೇ 22: ಚುನಾವಣೆಯಲ್ಲಿ ಆಯ್ಕೆಯಾದ ನೂತನ ಶಾಸಕರ ಪೈಕಿ ಇದೇ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸುತ್ತಿರುವ ಶಾಸಕರು ಸೇರಿದಂತೆ ಹಲವು ಮಂದಿ ಸದಸ್ಯರು ಶಕ್ತಿಕೇಂದ್ರದ ಮೆಟ್ಟಿಲುಗಳಿಗೆ ಶಿರಬಾಗಿ ನಮಸ್ಕಾರ ಮಾಡಿ ವಿಧಾನಸೌಧ ಪ್ರವೇಶಿಸಿದರು.

ಚಿಕ್ಕಪೇಟೆ ಕ್ಷೇತ್ರ ಉದಯ್ ಗರುಡಾಚಾರ್, ನವಲಗುಂದ ಕ್ಷೇತ್ರದ ಕೋನರೆಡ್ಡಿ, ವಿಶ್ವಾಸ್ ವೈದ್ಯ, ಗಣೇಶ್ ಪ್ರಸಾದ್, ಸುಳ್ಯ ಕ್ಷೇತ್ರದ ಭಾಗೀರಥಿ ಮುರುಳ್ಯ ಸೇರಿದಂತೆ ಹಲವು ಸದಸ್ಯರು ವಿಧಾನಸೌಧದ ಪ್ರವೇಶ ದ್ವಾದ ಮೆಟ್ಟಿಲುಗಳಿಗೆ ನಮಸ್ಕಾರ ಮಾಡಿ ವಿಧಾನಸೌಧಕ್ಕೆ ಪ್ರವೇಶ ಮಾಡಿದರು. ಮಂಡ್ಯ ಕ್ಷೇತ್ರದ ಶಾಸಕ ರವಿ ಗಣಿಗ ಅವರು ಎತ್ತಿನಗಾಡಿಯಲ್ಲಿ ತಮ್ಮ ಬೆಂಬಲಿಗರ ಜೊತೆಗೆ ಎತ್ತಿನ ಗಾಡಿಯಲ್ಲಿ ವಿಧಾನಸೌಧಕ್ಕೆ ಆಗಮಿಸುವ ಮೂಲಕ ಗಮನ ಸೆಳೆದರು.

ಸಾಕಷ್ಟು ಮಂದಿ ಇದ್ದಾರೆ: ‘ವಿಧಾನಸಭೆ ಸ್ಪೀಕರ್ ಸ್ಥಾನಕ್ಕೆ ನನ್ನ ಹೆಸರು ಪ್ರಸ್ತಾಪ ಆಗಿರುವ ಬಗ್ಗೆ ನನಗೆ ಗೊತ್ತಿಲ್ಲ. ಕಾನೂನು ಪದವಿ ಪಡೆದವರು ಸಾಕಷ್ಟು ಮಂದಿ ಹಿರಿಯರು ಇದ್ದಾರೆ. ನಾನೊಬ್ಬನೇ ಅಲ್ಲ. ಸಚಿವ ಸಂಪುಟ ವಿಸ್ತರಣೆ ವಿಶೇಷ ಅಧಿವೇಶನ ಮುಕ್ತಾಯದ ಬಳಿಕ ಆದಷ್ಟು ಶೀಘ್ರವೇ ಆಗಬಹುದು’ ಎಂದು ಶಿರಾ ಕ್ಷೇತ್ರ ಶಾಸಕ ಟಿ.ಬಿ.ಜಯಚಂದ್ರ ತಿಳಿಸಿದರು.

Similar News