ಮಹಿಳಾ ಪಿಎಸ್ಸೈ ಲೋಕಾಯುಕ್ತ ಬಲೆಗೆ

Update: 2023-05-24 14:44 GMT

ಬೆಂಗಳೂರು, ಮೇ 23: ಲಂಚ ಕೇಳಿದ ಆರೋಪದ ಮೇಲೆ ಇಲ್ಲಿನ ಶಿವಾಜಿನಗರ ಮಹಿಳಾ ಪೊಲೀಸ್ ಠಾಣೆಯ ಪಿಎಸ್ಸೈ ಸವಿತಾ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ ಎಂದು ವರದಿಯಾಗಿದೆ.

ಪ್ರಕರಣವೊಂದರ ಸಂಬಂಧ ಆರೋಪಿಯ ಜಾಮೀನು ಪ್ರಕ್ರಿಯೆ ಮಂಜೂರಿಗೆ 50 ಸಾವಿರ ರೂಪಾಯಿ ಲಂಚ ಕೇಳಿದ ಹಿನ್ನೆಲೆ ಬುಧವಾರ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಪೊಲೀಸರು, ಪಿಎಸ್ಸೈ ಸವಿತಾ ಹಣ ಸ್ವೀಕರಿಸುವಾಗ ಸಿಕ್ಕಿಬಿದ್ದಿದ್ದಾರೆ ಎನ್ನಲಾಗಿದೆ.

Similar News