ಸಂಸತ್ ಭವನದ ಉದ್ಘಾಟನೆ ಬಹಿಷ್ಕರಿಸಿರುವ ವಿರೋಧ ಪಕ್ಷಗಳ ವಿರುದ್ಧ ಪರೋಕ್ಷವಾಗಿ ಪ್ರಧಾನಿ ವಾಗ್ದಾಳಿ

Update: 2023-05-25 06:13 GMT

ಹೊಸದಿಲ್ಲಿ: ಜಪಾನ್, ಪಪುವಾ ನ್ಯೂಗಿನಿ ಹಾಗೂ  ಆಸ್ಟ್ರೇಲಿಯಾಕ್ಕೆ ಮೂರು ರಾಷ್ಟ್ರಗಳ ಪ್ರವಾಸ ಮುಗಿಸಿ ಗುರುವಾರ ದಿಲ್ಲಿಯ ಪಾಲಂ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ, ಮೇ 28 ರಂದು ನೂತನ ಸಂಸತ್ ಭವನದ ಉದ್ಘಾಟನೆಯನ್ನು ಬಹಿಷ್ಕರಿಸಿರುವ  ವಿರೋಧ ಪಕ್ಷಗಳ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ  ನಡೆಸಿದರು.

ಸಾವಿರಾರು ಭಾರತೀಯರು ಭಾಗವಹಿಸಿದ್ದ ಆಸ್ಟ್ರೇಲಿಯಾದ ಕಾರ್ಯಕ್ರಮವನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಮಾತ್ರವಲ್ಲ ದೇಶದ ಮಾಜಿ ಪ್ರಧಾನಿ ಹಾಗೂ  ವಿರೋಧ ಪಕ್ಷದ ನಾಯಕರೂ  ತಮ್ಮ ರಾಷ್ಟ್ರದ ಸಲುವಾಗಿ ಕಾರ್ಯಕ್ರಮದಲ್ಲಿ ಒಟ್ಟಿಗೆ ಸೇರಿದ್ದರು ಎಂದು ಹೇಳಿದರು.

ಗುರುವಾರ ಬೆಳಗ್ಗೆ ಪಾಲಂ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಮೋದಿಯವರಿಗೆ ಬಿಜೆಪಿ ಕಾರ್ಯಕರ್ತರು ಆತ್ಮೀಯವಾಗಿ ಸ್ವಾಗತಿಸಿದರು. ಪಕ್ಷದ ಅಧ್ಯಕ್ಷ ಜೆ.ಪಿ. ನಡ್ಡಾ ಕೂಡ ಉಪಸ್ಥಿತರಿದ್ದರು.

ತನ್ನನ್ನು  ಸ್ವಾಗತಿಸಲು ನೆರೆದಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, "ನಾನು ನನ್ನ ರಾಷ್ಟ್ರವನ್ನು ಪ್ರಪಂಚದ ಮುಂದೆ ಯಾವುದೇ ಹಿಂಜರಿಕೆಯಿಲ್ಲದೆ ಆತ್ಮವಿಶ್ವಾಸ ಹಾಗೂ  ಹೆಮ್ಮೆಯಿಂದ ವೈಭವೀಕರಿಸುತ್ತೇನೆ. ನೀವೆಲ್ಲರೂ ಸಂಪೂರ್ಣ ಬಹುಮತದೊಂದಿಗೆ ಆಯ್ಕೆ ಮಾಡಿರುವ ಸರಕಾರವೇ ಇದರ ಹಿಂದಿನ ಕಾರಣ''ಎಂದು  ಹೇಳಿದರು.

Similar News