×
Ad

ಸಿಎಂ ಹಾದಿಯಲ್ಲಿ ಸಚಿವ ಪರಮೇಶ್ವರ್​​​: ಹಾರ- ತುರಾಯಿಗಳನ್ನು ಸ್ವೀಕರಿಸದೆ ಇರಲು ನಿರ್ಧಾರ

Update: 2023-05-25 17:48 IST

ಬೆಂಗಳೂರು: 'ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿರ್ಧಾರದಂತೆಯೇ, ನಾನೂ ಸಹ ಗೌರವದ ಹೆಸರಿನಲ್ಲಿ ಪುಷ್ಪಗುಚ್ಚ, ಹಾರ-ತುರಾಯಿಗಳನ್ನು ಸ್ವೀಕರಿಸದೇ ಇರಲು ತೀರ್ಮಾನಿಸಿದ್ದೇನೆ' ಎಂದು ಸಚಿವ ಡಾ.ಜಿ ಪರಮೇಶ್ವರ್ ಪ್ರಕಟಿಸಿದ್ದಾರೆ. 

ಈ ಸಂಬಂಧ ಗುರುವಾರ ಟ್ವೀಟ್ ಮಾಡಿರುವ ಅವರು, ''ಯಾವುದೇ ಸಭೆ-ಸಮಾರಂಭಗಳಿಗೂ ಇದು ಅನ್ವಯವಾಗಲಿದೆ. ನಿಮ್ಮ ಪ್ರೀತಿ-ವಿಶ್ವಾಸ ಹಾಗೂ ಉಪಸ್ಥಿತಿಗಿಂತ ಮಿಗಿಲಾದದ್ದು ಬೇರೆ ಯಾವುದೂ ಇಲ್ಲ'' ಎಂದು ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ. 

ಕೆಲವು ದಿನಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸನ್ಮಾನ ರೂಪದಲ್ಲಿ ಸಾರ್ವಜನಿಕರಿಂದ ಹಾರ ಶಾಲು ಹೂವಿನ ಗುಚ್ಛಗಳನ್ನು ಸ್ವೀಕರಿಸುವುದಿಲ್ಲ. ಒಂದು ವೇಳೆ ಪ್ರೀತಿಯಿಂದ ಕೊಡಬೇಕು ಎಂದಿದ್ದರೆ ಪುಸ್ತಕಗಳನ್ನು ನೀಡುವಂತೆ ಟ್ವೀಟ್​​ ಮಾಡಿದ್ದರು.

Similar News