ಕೆಳಸೇತುವೆಯಲ್ಲಿ ನಿಂತ ನೀರಿನಿಂದ ಯುವತಿ ಸಾವು ಪ್ರಕರಣ: ಬಿಬಿಎಂಪಿಗೆ ‘ಲೋಕಾಯುಕ್ತ’ ನೋಟಿಸ್ ಜಾರಿ

Update: 2023-05-27 14:58 GMT

ಬೆಂಗಳೂರು, ಮೇ 27: ಧಾರಾಕಾರ ಮಳೆ ಸುರಿಯುತ್ತಿದ್ದ ವೇಳೆ ನಗರದ ಕೆಆರ್ ಸರ್ಕಲ್ ಕೆಳಸೇತುವೆಯಲ್ಲಿ ನೀರು ನಿಂತಿದ್ದರಿಂದ ಕಾರು ಮುಳುಗಿ 22 ವರ್ಷದ ಯುವತಿಯೊಬ್ಬರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿ ಕರ್ನಾಟಕ ಲೋಕಾಯುಕ್ತ ಸ್ವಯಂ ಪ್ರೇರಿತರಾಗಿ ಪ್ರಕರಣ ದಾಖಲಿಸಿಕೊಂಡಿದೆ. 

ಮೇ 21 ರಂದು ವಿಜಯವಾಡ ಮೂಲದ ಭಾನು ರೇಖಾ ಕುಟುಂಬ ಸಮೇತ ಪ್ರಯಾಣಿಸುತ್ತಿದ್ದ ಕಾರು ಜಲಾವೃತಗೊಂಡ ಅಂಡರ್‍ಪಾಸ್‍ನಲ್ಲಿ ಸಿಲುಕಿ ಸಾವನ್ನಪ್ಪಿದ್ದರು.  ಮಳೆನೀರು ಚರಂಡಿ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿದ್ದಕ್ಕೆ ಉತ್ತರ ನೀಡುವಂತೆ ಲೋಕಾಯುಕ್ತ ಬಿಬಿಎಂಪಿ ಅಧಿಕಾರಿಗಳಿಗೆ ನೋಟೀಸ್ ಜಾರಿ ಮಾಡಲಾಗಿದೆ. ಚರಂಡಿ ನಿರ್ವಹಣೆಯ ಹೊಣೆ ಹೊತ್ತಿರುವ ಅಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ಮೇಲ್ನೋಟಕ್ಕೆ ನಿರ್ಲಕ್ಷ್ಯ ತೋರಿದ್ದಾರೆ ಎಂದು ನೋಟೀಸ್‍ನಲ್ಲಿ ತಿಳಿಸಲಾಗಿದೆ.

ಚರಂಡಿ ನಿರ್ವಹಣೆಯಲ್ಲಿ ವಿಫಲವಾಗಿರುವುದು ‘ದುರಾಡಳಿತ’ದ ಸ್ಪಷ್ಟ ನಿದರ್ಶನವಾಗಿದೆ. ಹಲವು ಬಿಬಿಎಂಪಿ ಅಧಿಕಾರಿಗಳಿಗೆ ಸಮನ್ಸ್ ನೀಡಿ ವಿಷಯಕ್ಕೆ ಸಂಬಂಧಿಸಿದಂತೆ ವಿವರವಾದ ಮಾಹಿತಿ ನೀಡುವಂತೆ ಲೋಕಾಯುಕ್ತ ಸೂಚಿಸಿದೆ. 

Similar News