ಮಂಗಳೂರು: ನೆಹರೂ ಪುಣ್ಯತಿಥಿ ಕಾರ್ಯಕ್ರಮ

Update: 2023-05-27 15:07 GMT

ಮಂಗಳೂರು: ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಪುಣ್ಯತಿಥಿ ಕಾರ್ಯಕ್ರಮವು ಶನಿವಾರ ನಗರದ  ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ನಡೆಯಿತು.

ಈ ಸಂದರ್ಭ ಮಾತಾಡಿದ ಮನಪಾ ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಜವಾಹರಲಾಲ್ ನೆಹರೂ ಅವರು ಪ್ರಧಾನಿಯಾಗಿದ್ದ ಕಾಲದಲ್ಲಿ ದ.ಕ.ದಲ್ಲಿ ಸಂಸದರಾಗಿದ್ದ ಶ್ರೀನಿವಾಸ ಮಲ್ಯ ಮಂಗಳೂರಿನಲ್ಲಿ ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ, ಎನ್‌ಎಂಪಿಟಿ ಬಂದರು, ಎನ್‌ಐಟಿಕೆ ವಿದ್ಯಾಸಂಸ್ಥೆ ಸ್ಥಾಪನೆ ಸಹಿತ ಹಲವು ಸಂಸ್ಥೆಗಳನ್ನು ಜಿಲ್ಲೆಯಲ್ಲಿ ಸ್ಥಾಪನೆ ಮಾಡಲು ಪ್ರಮುಖ ಪಾತ್ರ ವಹಿಸಿದ್ದಾರೆ. ನೆಹರೂ ಮಂಗಳೂರಿಗೆ ಬಂದಾಗ ಭಾಷಣ ಮಾಡಿದ್ದ ಸ್ಮರಣಾರ್ಥವಾಗಿ ಆ ಮೈದಾನಕ್ಕೆ ನೆಹರೂ ಮೈದಾನ ಎಂದು ಹೆಸರಿಡಲಾಗಿತ್ತು, ಆದರೆ ಬಿಜೆಪಿಯು ನೆಹರೂ ಮೈದಾನ ಹೆಸರಿನ ಬದಲು ಕೇಂದ್ರ ಮೈದಾನವೆಂದು ಹೆಸರಿಡಲು ಪ್ರಯತ್ನಪಟ್ಟಿತ್ತು, ಆದರೆ ಮನಪಾದ ಕಾಂಗ್ರೆಸ್ ಸದಸ್ಯರು ಇದನ್ನು ವಿರೋಧಿಸಿದ್ದರು. ಅಲ್ಲದೆ ಆ ಮೈದಾನದಲ್ಲಿ ನೆಹರೂ ಪ್ರತಿಮೆಯನ್ನು ಪ್ರತಿಷ್ಠಾಪಿಸಿ ಗೌರವ ಸಲ್ಲಿಸಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬಿಎಂ ಅಬ್ಬಾಸ್ ಅಲಿ, ರಮಾನಂದ ಪೂಜಾರಿ, ಟಿ. ಹೊನ್ನಯ್ಯ, ಇಮ್ರಾನ್ ಎಆರ್, ಜೇಮ್ಸ್ ಶಿವಬಾಗ್, ಅನ್ಸಾರ್ ಶಾಲಿಮಾರ್, ಸಮರ್ಥ್ ಭಟ್, ನಜೀಬ್ ಮಂಚಿ, ಲಕ್ಷ್ಮಣ್ ಶೆಟ್ಟಿ, ರೋಬಿನ್ ಡಿಸೋಜ, ಯೋಗೀಶ್ ಕುಮಾರ್, ರಿತೇಶ್, ಯೋಗೀಶ್ ನಾಯಕ್ ಉಪಸ್ಥಿತರಿದ್ದರು.

ಟಿ.ಕೆ. ಸುಧೀರ್ ಸ್ವಾಗತಿಸಿದರು. ಶುಭೋದಯ ಆಳ್ವಾ ವಂದಿಸಿದರು.

Similar News