ಕಾಸರಗೋಡು: ಪೆರ್ಲದ ವ್ಯಾಪಾರಿ ಏಕೋಪನ ಸಮಿತಿ ಅಧ್ಯಕ್ಷ ಅಬ್ದುಲ್ ರಹಿಮಾನ್ ನಿಧನ

Update: 2023-05-28 06:29 GMT

ಕಾಸರಗೋಡು: ಪೆರ್ಲದ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಅಧ್ಯಕ್ಷರೂ, ಮರ್ಚೆಂಟ್ ವೆಲ್ಫೆರ್ ಸೊಸೈಟಿ ಸ್ಥಾಪಕರಾದ ಸಾಮಾಜಿಕ ಮುಂದಾಳು ಅಬ್ದುಲ್ ರಹಿಮಾನ್ (68) ಅಲ್ಪಕಾಲದ ಅಸೌಖ್ಯದಿಂದ  ಮಂಗಳೂರಿನ  ಖಾಸಗೀ ಆಸ್ಪತ್ರೆಯಲ್ಲಿ ಶನಿವಾರ ಸಂಜೆ ನಿಧನರಾಗಿದ್ದಾರೆ.

ನೂರ ಅಬ್ದುಲ್ ರಹಿಮಾನ್ ಎಂದೇ ಜನಜನಿತರಾಗಿರುವ ಇವರು ಸುಮಾರು ಅರ್ಧ ಶತಮಾನದಿಂದ ಪೆರ್ಲ ಪೇಟೆಯಲ್ಲಿ ಕೃಷಿಕರಿಗೆ ಉಪಯೋಗಪ್ರದವಾದ ವ್ಯಾಪರೋದ್ಯಮವನ್ನು ಆರಂಭಿಸಿ ಜನಪ್ರೀತಿ ಗಳಿಸಿದ್ದರು.  ಕಾಂಗ್ರೆಸ್ ತತ್ವ    ಸಿದ್ಧಾಂತಗಳಿಗೆ ಬದ್ಧರಾಗಿದ್ದ ಇವರು ಹಂತಾನುಹಂತವಾಗಿ ಪಕ್ಷ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು ಕುಂಬಳೆ ಬ್ಲೋಕ್ ಕಾಂಗ್ರೆಸ್ ನ ವಿವಿಧ ಸ್ಥಾನಗಳನ್ನು ಅಲಂಕರಿಸಿದ್ದರು. ಪೆರ್ಲದಲ್ಲಿ ವ್ಯಾಪಾರಿ ಸಂಘಟನೆಯಲ್ಲೂ ಚತುರತೆಯನ್ನು ಮೆರೆದ ಇವರು ಸುದೀರ್ಘ ಕಾಲ ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ಪೆರ್ಲ ಘಟಕ ಅಧ್ಯಕ್ಷರಾಗಿ ಸ್ತುತ್ಯಾರ್ಹ ಸೇವೆ ಸಲ್ಲಿಸಿದ್ದಾರೆ. ಇತ್ತೀಚೆಗೆ ವ್ಯಾಪರ ಭವನಕ್ಕೊಂದು ಸ್ವಂತ ಕಟ್ಡಡ ಹಾಗೂ  ವ್ಯಾಪಾರಿಗಳ ಮರ್ಚೆಂಟ್ ವೆಲ್ಫೆರ್ ಸೊಸೈಟಿ ಸ್ಥಾಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಮರ್ತ್ಯ ಪೆರ್ಲ ಜಮಾಯತ್ ಕಮಿಟಿಯ ದೀರ್ಘ ಕಾಲ ಕಾರ್ಯದರ್ಶಿಯಾಗಿ ಕಾರ್ಯ ಚಟುವಟಿಕೆಗಳಲ್ಲಿ ಮುಂದುವರಿದಿದ್ದರು.

ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷರ ಸಂತಾಪ :  , ಸಾಮಾಜಿಕ,ಧಾರ್ಮಿಕ ಸಾಂಸ್ಕೃತಿಕ ಹೀಗೆ ಸರ್ವ ವಲಯದಲ್ಲೂ ಆಸಕ್ತಿ ಅಭಿರುಚಿ ಪ್ರಕಟಿಸುತ್ತಿದ್ದ ಅಬ್ದುಲ್ ರಹಿಮಾನ್ ಅವರು ನಿಧನರಾಗಿರುವುದು ಈ ಎಲ್ಲಾ  ವಲಯಕ್ಕೊಂದು ಅಪಾರ ನಷ್ಟವಾಗಿದೆ ಎಂದು ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್.ಸಂತಾಪ ವ್ಯಕ್ತಪಡಿಸಿದ್ದಾರೆ.

ಅಬ್ದುಲ್ ರಹಿಮಾನ್ ರ ಪತ್ನಿ ದೈನಾಭಿ ಮಂಜೇಶ್ವರ ಬ್ಲೋಕ್ ಪಂ. ಮಾಜಿ ಸದಸ್ಯೆಯಾಗಿದ್ದಾರೆ. ಮೂರು ಮಂದಿ ಪುತ್ರರು ಹಾಗೂ ಅಪಾರ  ಬಂಧುಮಿತ್ರರನ್ನು ಅಗಲಿದ್ದಾರೆ.

ಅಬ್ದುಲ್ ರಹಿಮಾನ್ ಅವರ ನಿಧನಕ್ಕೆ ವ್ಯಾಪಾರಿಗಳು ಆದಿತ್ಯವಾರ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ  ಸಂತಾಪ ವ್ಯಕ್ತಪಡಿಸಿದ್ದಾರೆ.

Similar News

ವಸಂತಿ