ಕಣಚೂರು: ವನಮಹೋತ್ಸವಕ್ಕೆ ಚಾಲನೆ

Update: 2023-05-28 14:24 GMT

ಕೊಣಾಜೆ: ಭಾರತದ ಸಂವಿಧಾನದಲ್ಲಿ ಮರ ಕಡಿದರೆ ಕಠಿಣ ಶಿಕ್ಷ ನೀಡುವ ಕಾನೂನು ಇದೆ. ಅನುಮತಿ ಪಡೆದು ಒಂದು ಸಾಯುವ ಸ್ಥಿತಿಯಲ್ಲಿರುವ ಮರ ಕಡಿದರೆ ಮೂರು ಗಿಡಗಳನ್ನು ನೆಟ್ಟು ಅದನ್ನು ಪೋಷಣೆ ಮಾಡುವ ಕಾರ್ಯ ಮರ ಕಡಿದವನಿಗೆ ಅರಣ್ಯ ಇಲಾಖೆ ಸೂಚಿಸುತ್ತದೆ. ಈ ನಿಟ್ಟಿನಲ್ಲಿ ಮರಗಳನ್ನು ಬೆಳೆಸಿ ಅದನ್ನು ಪೋಷಿಸುವ ಕಾರ್ಯ ಇಂದಿನ ಯುವ ಪೀಳಿಗೆಯಿಂದ ಆಗಬೇಕು, ಈ ಮೂಲಕ ಪರಿಸರ ರಕ್ಷಣೆಗೆ ತಮ್ಮದೇ ಆದ ಕೊಡುಗೆಯನ್ನು ನೀಡಬೇಕು ಎಂದು ಕಣಚೂರು ಇಸ್ಲಾಮಿಕ್ ಎಜ್ಯುಕೇಶನ್ ಟ್ರಸ್ಟ್  ಅಧ್ಯಕ್ಷ ಡಾ‌. ಯು.ಕಣಚೂರು ಮೋನು ಅಭಿಪ್ರಾಯಪಟ್ಟರು.

ಕಣಚೂರು ಇನ್‍ಸ್ಟಿಟ್ಯೂಟ್  ಆಫ್ ಮೆಡಿಕಲ್ ಸೈನ್ಸಸ್ ಕ್ಯಾಂಪಸ್‍ನಲ್ಲಿ ಕಣಚೂರು ಇನ್‍ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ಇದರ ಆಶ್ರಯದಲ್ಲಿ ನಡೆದ ಸ್ವಚ್ಛ ಭಾರತ್ ಪಕ್‍ವಾಡ ಪ್ಲಾಸ್ಟಿಕ್ ಮುಕ್ತ ಕ್ಯಾಂಪಸ್ ಕಾರ್ಯಕ್ರಮದ  ಅಂಗವಾಗಿ ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಹಿಂದೆ ಪರಿಸರ ಉತ್ತಮ ಸ್ಥಿತಿಯಲ್ಲಿತ್ತು. ಆದರೆ ಇಂದು ಜನಸಂಖ್ಯೆಯ ಹೆಚ್ಚಳದೊಂದಿಗೆ ಪರಿಸರದ ಹಾನಿಯೂ ಆಗುತ್ತಿದೆ. ಪ್ಲಾಸಿಟಿಕ್ ಸೇರಿದಂತೆ ತ್ಯಾಜ್ಯಗಳಿಂದ ಪರಿಸರ ಹಾನಿಯಾಗುತ್ತಿದ್ದು, ಯುವ ಜನಾಂಗ ಪರಿಸರ ಉಳಿಸುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕು ಎಂದರು.

ಕಾರ್ಯಕ್ರಮದಲ್ಲಿ ಕಣಚೂರು ಇನ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‍ನ ಡೀನ್ ರತ್ನಾಕರ್ ಯು.ಪಿ., ಕಣಚೂರು ಆರೋಗ್ಯ ಸಂಸ್ಥೆಗಳ ಸಲಹಾ ಸಮಿತಿ ಅಧ್ಯಕ್ಷ ಡಾ. ಮೊಹಮ್ಮದ್ ಇಸ್ಮಾಯಿಲ್ ಹೆಜಮಾಡಿ, ವೈದ್ಯಕೀಯ ಅದೀಕ್ಷಕ ಡಾ. ಹರೀಶ್ ಶೆಟ್ಟಿ, ಉಪ ವೈದ್ಯಕೀಯ ಅಧೀಕ್ಷಕ ಡಾ.ಶಹನವಾಝ್ ಮಾಣಿಪ್ಪಾಡಿ ಉಪಸ್ಥಿತರಿದ್ದರು.

ಕಣಚೂರು ಹೆಲ್ತ್ ಅಲೈಡ್ ಸೈನ್ಸ್‍ನ ಪ್ರಾಂಶುಪಾಲೆ ಡಾ. ಶಮೀಮಾ ಸ್ವಾಗತಿಸಿದರು. ಉಪನ್ಯಾಸಕಿ ಶಾರುಣ್ ಮರಿಯಾ ಸನ್ನಿ ಕಾರ್ಯಕ್ರಮ ನಿರ್ವಹಿಸಿದರು. ನಿತಿನ್ ವಂದಿಸಿದರು.

Similar News