ಅಮೃತಸರ: ಶಂಕಿತ ಪಾಕ್ ಡ್ರೋನ್ ಹೊಡೆದುರುಳಿಸಿದ ಬಿಎಸ್ಎಫ್

Update: 2023-05-29 15:41 GMT

ಚಂಡಿಗಡ,ಮೇ 29: ಪಂಜಾಬಿನ ಅಮೃತಸರದಲ್ಲಿ ಅಂತರರಾಷ್ಟ್ರೀಯ ಗಡಿಯ ಸಮೀಪ ಭಾರತೀಯ ಪ್ರದೇಶದಲ್ಲಿ ನುಸುಳಿದ್ದ ಶಂಕಿತ ಪಾಕಿಸ್ತಾನಿ ಡ್ರೋನ್ವೊಂದನ್ನು ಗಡಿ ರಕ್ಷಣಾ ಪಡೆ (ಬಿಎಸ್ಎಫ್)ಯು ಹೊಡೆದುರುಳಿಸಿದೆ ಎಂದು ಅಧಿಕಾರಿಯೋರ್ವರು ಸೋಮವಾರ ತಿಳಿಸಿದರು.

ರವಿವಾರ ರಾತ್ರಿ 8:50ರ ಸುಮಾರಿಗೆ ಅಮೃತಸರ ಜಿಲ್ಲೆಯ ಧನೋಯಿ ಖುರ್ದ್ ಗ್ರಾಮದಲ್ಲಿ ಮಾನವರಹಿತ ವೈಮಾನಿಕ ವಾಹನದ ಝೇಂಕಾರದ ಶಬ್ದ ಕೇಳಿದ ಬಳಿಕ ಬಿಎಸ್ಎಫ್ ಯೋಧರು ಅದರತ್ತ ಗುಂಡುಗಳನ್ನು ಹಾರಿಸಿದ್ದರು ಎಂದರು.

ಶೋಧ ಕಾರ್ಯಾಚರಣೆಯಲ್ಲಿ ಮೈದಾನವೊಂದರಿಂದ ಕಪ್ಪು ಬಣ್ಣದ ಡ್ರೋನ್ ಮತ್ತು ಅದರಲ್ಲಿದ್ದ 2.70 ಕೆ.ಜಿ.ಮಾದಕ ದ್ರವ್ಯಗಳಿದ್ದ ಚೀಲವೊಂದನ್ನು ವಶಪಡಿಸಿಕೊಳ್ಳಲಾಗಿದೆ ಎಂದೂ ಅಧಿಕಾರಿ ತಿಳಿಸಿದರು.

Similar News