ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ರನ್ ವೇ ನವೀಕರಣ ಕಾಮಗಾರಿ ಪೂರ್ಣ

Update: 2023-05-30 16:51 GMT

ಮಂಗಳೂರು: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ತನ್ನ 2.45ಕಿಲೋಮೀಟರ್ ಉದ್ದದ ರನ್‌ವೇ ನವೀಕರಣ ( ಮರುಕಾರ್ಪೆಟಿಂಗ್) ಕಾರ್ಯವನ್ನು ಪೂರ್ಣಗೊಳಿಸಿದೆ. ಈ ಯೋಜನೆಯ ಮೂಲಕ ವಿಮಾನಯಾನ ಸುರಕ್ಷತಾ ನಿಯಂತ್ರಕವು ನಿಗದಿಪಡಿಸಿದ ಅನುಸರಣೆ ಮಾನ ದಂಡಗಳನ್ನು ಪೂರೈಸುವ ಗುರಿಯನ್ನು ಪೂರ್ಣ ಗೊಳಿಸಿದೆ.

ಈ ಕಾಮಗಾರಿ ಮಾರ್ಚ್ 10 ರಿಂದ 75-ಕೆಲಸದ ದಿನಗಳಲ್ಲಿ ಪೂರ್ಣಗೊಂಡಿದೆ,  ರನ್‌ವೇಯಲ್ಲಿ ಡಾಂಬರಿನ ಮೂಲಕ ಹೊಂದಿಕೊಳ್ಳುವ ಮೇಲ್ಪದರ ಆಗಿದೆ, ಇದು ಭಾರತದಲ್ಲಿ ಈ ರೀತಿಯ ಮೊದಲನೆಯದು. ವಿಮಾನ ನಿಲ್ದಾಣವು ಜನವರಿ 27 ರಂದು ಯೋಜನೆಯ ಬಗ್ಗೆ ಪ್ರಾಥಮಿಕ ಸಮೀಕ್ಷೆ ಕಾರ್ಯವನ್ನು ಪ್ರಾರಂಭಿಸಿತ್ತು. ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಪ್ರತಿ ದಿನ ಸುಮಾರು 36 ವಿಮಾನಗಳ  ಹಾರಾಟ ವನ್ನು ನಿರ್ವಹಿಸುವ ಕರ್ನಾಟಕದ ಎರಡನೇ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣ ವಾಗಿದೆ. ನಿಗದಿತ ವಿಮಾನಗಳ ಕಾರ್ಯಾಚರಣೆಯ ಮೇಲೆ ಪರಿಣಾಮ ಬೀರದಂತೆ ರನ್‌ವೇಯನ್ನು ಮರುಕಾರ್ಪೆಟ್ ಮಾಡಲು ವಿಮಾನ ನಿಲ್ದಾಣವು ಪ್ರತಿ ದಿನ ಬೆಳಗ್ಗೆ 9.30 ರಿಂದ ಸಂಜೆ 6 ಗಂಟೆಯವರೆಗೆ ಬಳಸಿದೆ. ಯೋಜನೆಯನ್ನು ಪೂರ್ಣ ಗೊಳಿಸಲು ತೆಗೆದುಕೊಂಡ 75 ದಿನಗಳು ಮತ್ತು 529 ಗಂಟೆಗಳ ಅವಧಿಯಲ್ಲಿ, ವಿಮಾನ ನಿಲ್ದಾಣದಲ್ಲಿ ಉಳಿದ 14.5 ಗಂಟೆಗಳ ಅವಧಿಯಲ್ಲಿ ಸರಾಸರಿ 18 ದೇಶೀಯ ಮತ್ತು ಅಂತರಾಷ್ಟ್ರೀಯ ವಿಮಾನಗಳಿಗೆ ರನ್‌ವೇಯನ್ನು ಪ್ರತಿದಿನ ತೆರೆದಿತ್ತು. ಮಾರ್ಚ್ 10 ರಿಂದ ಮೇ 28 ರವರೆಗೆ ಯೋಜನೆಯು ಎಂಭತ್ತು ಅತ್ಯಾಧುನಿಕ ಉಪಕರಣಗಳನ್ನು ಬಳಸಿಕೊಂಡು 82-ಕಿಮೀ ರಸ್ತೆಗೆ  ಹಾಕುವುದಕ್ಕೆ ಸಮಾನವಾದ 81,696 ಟನ್‌ಗಳಷ್ಟು ಡಾಂಬರನ್ನು ಬಳಸಿದೆ. ರನ್‌ವೇಯ ಭವಿಷ್ಯದ ಕಾರ್ಯಾಚರಣೆಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ರನ್ವೇ ಸೆಂಟರ್ ಲೈಟಿಂಗ್ ಅನ್ನು ಅಳವಡಿಸಲು ಮಂಗಳೂರು ವಿಮಾನ ನಿಲ್ದಾಣ  ಅವಕಾಶ ಕಲ್ಪಿಸಿದೆ. “ವಿಮಾನ ನಿಲ್ದಾಣದ ಕಾರ್ಯನಿರ್ವಾಹಕ ನಾಯಕತ್ವವು ನಿಗದಿತ ಅವಧಿಗಿಂತ ಮುಂಚಿತವಾಗಿ ಯೋಜನೆಯನ್ನು ಪೂರ್ಣಗೊಳಿಸಿದ್ದಕ್ಕಾಗಿ ವಿಮಾನ ನಿಲ್ದಾಣ ತಂಡವನ್ನು ಶ್ಲಾಘಿಸಿದೆ. ಮಂಗಳೂರು ವಿಮಾನ ನಿಲ್ದಾಣವನ್ನು ಭಾರತದ ಸುರಕ್ಷಿತ ಟೇಬಲ್‌ಟಾಪ್ ವಿಮಾನ ನಿಲ್ದಾಣವನ್ನಾಗಿ ಮಾಡಲು, ಬದಲಾದ ಪ್ರಯಾಣದ ಸಮಯವನ್ನು ನಿಭಾಯಿಸಲು ಸಹಕರಿಸಿದ  ಪ್ರದೇಶದ ಜನರಿಗೆ ಮತ್ತು ಆಡಳಿತಕ್ಕೆ ಧನ್ಯವಾದಗಳನ್ನು ಅರ್ಪಿಸಿದೆ ಎಂದು ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ.

ರನ್‌ವೇ ರಿಕಾರ್ಪೆಟಿಂಗ್ ಕೆಲಸಪೂರ್ಣ ಗೊಂಡ ಬಗ್ಗೆಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ತಂಡಗಳು ದೃಡೀಕರಿಸಿದೆ. ಸದೃಢ ವಾದ  ರನ್‌ವೇಯಲ್ಲಿ ಡಾಂಬರಿನ ಹೊಂದಿಕೊಳ್ಳುವ ರೀತಿಯ ಮೇಲ್ಪದರವು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾರ್ಯಗತಗೊಳಿಸಲಾದ ರನ್‌ವೇ ರಿಕಾರ್ಪೆಟಿಂಗ್ ಕಾರ್ಯದ  ವಿಶೇಷತೆ ಯಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Similar News