ವಿಟ್ಲ: ವಿಠಲ ಪಿಯು ಕಾಲೇಜಿನ 2001ನೇ ಸಾಲಿನ ವಿದ್ಯಾರ್ಥಿಗಳ 'ಸ್ನೇಹ ಸಮ್ಮಿಲನ'

Update: 2023-05-31 06:47 GMT

ವಿಟ್ಲ, ಮೇ 31: ಇಲ್ಲಿನ ವಿಠಲ ಪದವಿ ಪೂರ್ವ ಕಾಲೇಜಿನ 2000-2001ನೇ ಸಾಲಿನ ಕಲಾ ವಿಭಾಗದ ವಿದ್ಯಾರ್ಥಿಗಳ 'ಸ್ನೇಹ ಸಮ್ಮಿಲನ' ಹಾಗೂ 'ಗುರುವಂದನೆ' ಕಾರ್ಯಕ್ರಮ ಇತ್ತೀಚೆಗೆ ಕಾಲೇಜಿನ ಸುವರ್ಣ ಮಹೋತ್ಸವ ರಂಗ ಮಂದಿರದಲ್ಲಿ ಜರುಗಿತು. 

ಕಾರ್ಯಕ್ರಮವನ್ನು ಹಳೆಯ ವಿದ್ಯಾರ್ಥಿಗಳಾದ ನಿವೃತ್ತ ಸೈನಿಕ ವಿ.ಎಂ.ನಿಸಾರ್ ಹಾಗೂ ಕೃಷಿಕ ಮಹಿಳೆ ಸುಜಾತಾ ಉದ್ಘಾಟಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ನಿವೃತ್ತ ಪ್ರಾಂಶುಪಾಲರಾದ ಅನಂತಕೃಷ್ಣ ಹೆಬ್ಬಾರ್, ರಾಧಾಕೃಷ್ಣ ಭಟ್, ನಿವೃತ್ತ ಸಮಾಜಶಾಸ್ತ್ರ ಪ್ರಾಧ್ಯಾಪಕ ವಸಂತಚಂದ್ರ ಮತ್ತು ಪ್ರಾಂಶುಪಾಲ ಎ.ಎಸ್.ಆದರ್ಶ ಚೊಕ್ಕಾಡಿ, ಅರ್ಥಶಾಸ್ತ್ರ ಉಪನ್ಯಾಸಕಿ ಚಂದ್ರಕಲಾ, ಇತಿಹಾಸ ಉಪನ್ಯಾಸಕ ಅಣ್ಣಪ್ಪ ಸಾಸ್ತಾನ ಅವರಿಗೆ ವಿದ್ಯಾರ್ಥಿಗಳಿಂದ ಗುರುವಂದನೆ, ಸನ್ಮಾನ ನಡೆಯಿತು. ಬಳಿಕ ಮಾತನಾಡಿದ ಎಲ್ಲಾ ಉಪನ್ಯಾಸಕರು ಹಿತನುಡಿಗಳನ್ನಾಡಿ ಶುಭ ಹಾರೈಸಿದರು.

ವಿಠಲ ಎಜ್ಯುಕೇಶನ್ ಸೊಸೈಟಿಯ ಕಾರ್ಯದರ್ಶಿ ರಾಧಾಕೃಷ್ಣ ನಾಯಕ್, ಕೋಶಾಧಿಕಾರಿ ಬಾಬು ಕೆ.ವಿ. ಹಾಗೂ ಸದಸ್ಯರಾದ ನಿತ್ಯಾನಂದ ನಾಯಕ್ ಎಂ. ಉಪಸ್ಥಿತರಿದ್ದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಿಠಲ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎ.ಎಸ್.ಆದರ್ಶ ಚೊಕ್ಕಾಡಿ ಮಾತನಾಡಿ ಶುಭ ಹಾರೈಸಿದರು.

ಲೋಕೇಶ್ ಕಾಶೀಮಠ, ಅಕ್ಷತಾ, ಹನೀಫ್, ರೈಹಾನ, ಪ್ರಶಾಂತಿ, ನವೀನ್ ವಿಟ್ಲ, ನಿಸಾರ್ ಮತ್ತಿತರರು ಕಾಲೇಜು ದಿನಗಳ ಸಿಹಿ ನೆನಪುಗಳನ್ನು ಮೆಲುಕು ಹಾಕಿದರು.

ಪ್ರೀಮಾ ಮತ್ತು ಲೋಕೇಶ್ ಪ್ರಾರ್ಥಿಸಿದರು. ಅನುಪಮಾ ಸನ್ಮಾನಿತರನ್ನು ಪರಿಚಯಿಸಿದರು. ಸಂಧ್ಯಾ ಮತ್ತು ಹನೀಫ್ ಕಾರ್ಯಕ್ರಮ ನಿರೂಪಿಸಿದರು. ಪ್ರಶಾಂತಿ ಸ್ವಾಗತಿಸಿದರು. ಸೌಮ್ಯಾ ರಾವ್ ವಂದಿಸಿದರು. ಸುಮಯ್ಯ, ಗೋವಿಂದ ನಾರಾಯಣ ಭಟ್, ಕೆ.ಬಿ.ನಸೀಮಾ, ಇಸ್ಮಾಯೀಲ್, ಭವ್ಯಾ, ಅರ್ಪಣಾ ಮತ್ತಿತರರು ಸಹಕರಿಸಿದರು.

Similar News