ಬೆಂಗಳೂರು: ನೂತನ ಪೊಲೀಸ್ ಆಯುಕ್ತರಾಗಿ ಬಿ. ದಯಾನಂದ ಅಧಿಕಾರ ಸ್ವೀಕಾರ

Update: 2023-05-31 16:08 GMT

ಬೆಂಗಳೂರು: ನಾನು ಬೆಂಗಳೂರಿನಲ್ಲಿ ಹುಟ್ಟಿ ಬೆಳೆದವ. ನಗರದಲ್ಲಿ ಪೊಲೀಸ್ ವ್ಯವಸ್ಥೆಯನ್ನು ಬಲ್ಲೆ, ಜತೆಗೆ, ಬಹಳಷ್ಟು ಸವಾಲುಗಳಿವೆ. ಅದನ್ನು ಎದರಿಸಲು ಎಲ್ಲ ಸಿಬ್ಬಂದಿಯನ್ನು ಗಮನಕ್ಕೆ ತೆಗೆದುಕೊಂಡು ಕೆಲಸ ಮಾಡಿ ಬೆಂಗಳೂರು ಬದಲಾವಣೆ ಬಗ್ಗೆ ಹೆಚ್ಚಿನ ಹೊತ್ತು ನೀಡುತ್ತೇನೆ ಎಂದು ಎಂದು ನಗರದ ನೂತನ ಪೊಲೀಸ್ ಆಯುಕ್ತ ಬಿ.ದಯಾನಂದ ತಿಳಿಸಿದ್ದಾರೆ.

ಅಂತರಿಕ ಭದ್ರತಾ ದಳದ ಡಿಜಿಪಿಯಾಗಿ ವರ್ಗಾವಣೆಯಾಗಿರುವ ಪ್ರತಾಪ್ ರೆಡ್ಡಿ ಅವರಿಂದ ಬುಧವಾರ ಬ್ಯಾಟನ್ ಸ್ವೀಕರಿಸಿ ಪೊಲೀಸ್ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪೊಲೀಸ್ ಠಾಣೆಗಳನ್ನು ಜನಸ್ನೇಹಿಗೊಳಿಸಿ ಅಲ್ಲಿಯೇ ಜನ ಸಾಮಾನ್ಯರ ಸಮಸ್ಯೆಗಳಿಗೆ ಪರಿಹಾರ ಒದಗಿಸಲಾಗುವುದು ಎಂದರು.

ಜನ ಸಾಮಾನ್ಯರ ಸಮಸ್ಯೆಗಳಿಗೆ ಪೊಲೀಸ್ ಠಾಣೆಗಳಲ್ಲಿ ಪರಿಹಾರ ದೊರಕದಿದ್ದರೆ ಹಿರಿಯ ಅಧಿಕಾರಿಗಳು ಜನ ಪ್ರತಿನಿಧಿಗಳ ಬಳಿಗೆ ಹೋಗುತ್ತಾರೆ ಅದನ್ನು ತಪ್ಪಿಸುವುದು ನನ್ನ ಮೊದಲ ಆದ್ಯತೆಯಾಗಿದೆ. ಶ್ರೀಮಂತರು, ಬಲಾಡ್ಯರು,ರಾಜಕೀಯ ಬಲ ಹೊಂದಿರುವವರಿಗೆ ಮಾತ್ರ ಪೊಲೀಸ್ ಠಾಣೆಗಳಲ್ಲಿ ನೆರವು ಸಿಗಲಿದೆ ಎನ್ನುವ ಮನೋಭಾವವನ್ನು ತಪ್ಪಿಸಿ ಎಲ್ಲರಿಗೂ ನ್ಯಾಯ ಸಮಸ್ಯೆಗಳಿಗೆ ಪರಿಹಾರ ದೊರಕುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. 

ಇನ್ನೂ, ನಗರದಲ್ಲಿ ರೌಡಿ ಚಟುವಟಿಕೆಗಳನ್ನು ಮಟ್ಟಹಾಕಲು ಹಿಂದಿನ ಪೊಲೀಸ್ ಆಯುಕ್ತರುಗಳು ಶ್ರಮಿಸಿ ಕೈಗೊಂಡಿರುವ ಹಲವು ಕ್ರಮಗಳನ್ನು ಮುಂದುವರೆಸಿ ನಗರವನ್ನು ರೌಡಿ ಚಟುವಟಿಕೆಗಳಿಂದ ಮುಕ್ತಗೊಳಿಸಲು ಶ್ರಮಿಸುತ್ತೇನೆ ಎಂದ ಅವರು, ಸಾಮಾಜಿಕ ಜಾಲತಾಣಗಳ ಬಳಕೆಯಿಂದ ಎಷ್ಟು ಪ್ರಯೋಜ ನಗಳಿವೆಯೋ ಅಷ್ಟೇ ದುಷ್ಪರಿಣಾಮಗಳಿವೆ. ಅದರಿಂದಾಗಿ ಒಳ್ಳೆಯದನ್ನು ಬಳಸಿ ನಕಲಿ ಪ್ರಚೋದನಕಾರಿ ಪೋಸ್ಟ್ ಕಾಮೆಂಟ್ ಗಳ ಮೇಲೆ ನಿಗಾ ವಹಿಸಲಾಗುವುದು ಎಂದು ನುಡಿದರು.

Similar News