ಕೋಮು ಹತ್ಯೆಗಳ ಪಾರದರ್ಶಕ ತನಿಖೆಗೆ ಶಾಫಿ ಸಅದಿ ಆಗ್ರಹ

Update: 2023-06-01 13:56 GMT

ಬೆಂಗಳೂರು, ಮೇ 31: ರಾಜ್ಯದ ಎಲ್ಲ ಜಾತಿ, ಧರ್ಮ, ಭಾಷೆಯ ಜನರು ಅನ್ಯೋನತೆ, ಸೌಹಾರ್ದತೆ ಹಾಗೂ ಸಹಬಾಳ್ವೆಯೊಂದಿಗೆ ಜೀವನ ಮಾಡಲು ಸೂಕ್ತವಾದ ಆಡಳಿತಾತ್ಮಕ ಕ್ರಮಗಳನ್ನು ಕೈಗೊಳ್ಳುತ್ತೀರಾ ಎಂದು ರಾಜ್ಯದ ಜನತೆ ತಮ್ಮ(ಮುಖ್ಯಮಂತ್ರಿ ಸಿದ್ದರಾಮಯ್ಯ) ಮೇಲೆ ಭರವಸೆ ಇರಿಸಿದ್ದಾರೆ ಎಂದು ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಎನ್.ಕೆ.ಮುಹಮ್ಮದ್ ಶಾಫಿ ಸಅದಿ ತಿಳಿಸಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ಗೆ ಪತ್ರ ಬರೆದಿರುವ ಅವರು, ಈ ನಿಟ್ಟಿನಲ್ಲಿ ಕಳೆದ ಕೆಲವು ಕೋಮು ಪ್ರೇರಿತ ಗಲಭೆಗಳಲ್ಲಿ ಅಮಾಯಕರ ಸಾವುಗಳು ನಡೆದಿದ್ದು, ಅದರ ಪಾರದರ್ಶಕ ತನಿಖೆ ಮತ್ತು ಮೃತರ ಕುಟುಂಬಗಳಿಗೆ ಗರಿಷ್ಠ ಪರಿಹಾರ ಧನ ನೀಡಬೇಕಾಗಿ ವಿನಂತಿಸಿದ್ದಾರೆ.

ಅದರಲ್ಲೂ ಮಂಗಳೂರು ಗೋಲಿಬಾರ್‌ನಲ್ಲಿ ಅಮಾನವೀಯವಾಗಿ ಮೃತರಾದ ಅಬ್ದುಲ್ ಜಲೀಲ್ ಕಂದಕ್, ನೌಶೀನ್ ಕುದ್ರೋಳಿ ಹಾಗೂ ಕೋಮುಗಲಭೆಯಲ್ಲಿ ಮೃತರಾದ ಮಸೂದ್ ಬೆಳ್ಳಾರೆ, ಫಾಝಿಲ್ ಹಾಗೂ ಜಲೀಲ್ ಮತ್ತು ಇದ್ರೀಸ್ ಪಾಷ(ಮಂಡ್ಯ), ಸಮೀರ್ ಶಹಪುರ ಮುಂತಾದವರ ಕುಟುಂಬಗಳು ಪಾರದರ್ಶಕ ತನಿಖೆಗೆ ನಿರಂತರ ಬೇಡಿಕೆ ಇಟ್ಟಿರುವುದು ಉಲ್ಲೇಖನೀಯ. ಸೂಕ್ತ ತನಿಖೆ ಮತ್ತು ಗರಿಷ್ಠ ಪರಿಹಾರ ಧನ ನೀಡಬೇಕಾಗಿ ಕಳಕಳಿಯಿಂದ ವಿನಂತಿಸುತ್ತಿದ್ದೇನೆ ಎಂದು ಶಾಫಿ ಸಅದಿ ಹೇಳಿದ್ದಾರೆ.

Similar News