ಮಂಗಳೂರು: ಕೆವೈಸಿ ಅಪ್ಡೇಟ್‌ಗೆ ಸಂಬಂಧಿಸಿ ದಂಪತಿಗೆ ವಂಚನೆ; ಪ್ರಕರಣ ದಾಖಲು

Update: 2023-06-01 16:58 GMT

ಮಂಗಳೂರು, ಜೂ.1: ಕೆವೈಸಿ ಅಪ್ಡೇಟ್‌ಗೆ ಸಂಬಂಧಿಸಿದ ಲಿಂಕ್ ಎಂದು ದಂಪತಿಗೆ ಎಸ್ಸೆಮ್ಮೆಸ್ ಕಳುಹಿಸಿ 1,21,400 ರೂ. ವಂಚಿಸಿರುವ ಬಗ್ಗೆ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರುದಾರರಿಗೆ 2022ರ ಅ.14ರಂದು ಅಪರಿಚಿತ ಸಂಖ್ಯೆಯಿಂದ ಎಸ್ಸೆಮ್ಮೆಸ್ ಬಂದಿದೆ. ಅದರಲ್ಲಿರುವ ದೂರವಾಣಿ ಸಂಖ್ಯೆಗೆ ಕರೆ ಮಾಡಿ ವಿಚಾರಿಸಿದಾಗ ಬ್ಯಾಂಕ್ ಖಾತೆ ಬ್ಲಾಕ್ ಆಗಿದ್ದು, ಅದನ್ನು ಸರಿಪಡಿಸಲು ಡೆಬಿಟ್ ಕಾರ್ಡ್ ಮತ್ತು ಅಕೌಂಟ್ ವಿವರಗಳನ್ನು ಅಪರಿಚಿತ ವ್ಯಕ್ತಿ ಕೇಳಿದ್ದಾನೆ. ಇದನ್ನು ನಿಜವೆಂದು ನಂಬಿ ಅವರು ತಮ್ಮ ಗಂಡನ ಬ್ಯಾಂಕ್ ಖಾತೆ ಮತ್ತು ಡೆಬಿಟ್ ಕಾರ್ಡ್ ವಿವರಗಳನ್ನು ತಿಳಿಸಿದ್ದಾರೆ. ಜತೆಗೆ ಒಟಿಪಿಯನ್ನೂ ಹೇಳಿದ್ದಾರೆ. ದೂರುದಾರರ ಖಾತೆಯ ವಿವರ, ಒಟಿಪಿಯನ್ನೂ ಅಪರಿಚಿತ ವ್ಯಕ್ತಿ ಪಡೆದುಕೊಂಡಿದ್ದಾನೆ. ಇದಾದ ಸ್ವಲ್ಪ ಹೊತ್ತಿನಲ್ಲೇ ಗಂಡನ ಬ್ಯಾಂಕ್ ಖಾತೆಯಿಂದ 71,400 ರೂ. ಮತ್ತು ಅವರ ಖಾತೆಯಿಂದ 50 ಸಾವಿರ ರೂ. ವರ್ಗಾವಣೆಯಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

Similar News