ಆಗಸ್ಟ್ 15ರಂದು ಗೃಹ ಲಕ್ಷ್ಮೀ ಯೋಜನೆ ಜಾರಿ; ಬಿಪಿಎಲ್, ಎಪಿಎಲ್ ಕಾರ್ಡುದಾರರಿಗೂ ಅನ್ವಯ

ಜೂನ್​ 15 ರಿಂದ ಅರ್ಜಿ ಸಲ್ಲಿಸಲು ಸಮಯವಕಾಶ ► ಸಿಎಂ ಸಿದ್ದರಾಮಯ್ಯ ಘೋಷಣೆ

Update: 2023-06-02 13:50 GMT

ಬೆಂಗಳೂರು: 'ಗೃಹ ಲಕ್ಷ್ಮೀ ಯೋಜನೆಯಡಿ ಮನೆಯ ಯಜಮಾನಿ ಖಾತೆಗಳಿಗೆ 2000 ರೂ. ಜಮೆ ಮಾಡಲಾಗುವುದು' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. 

ಈ ಬಗ್ಗೆ ಸಂಪುಟ ಸಭೆಯ ಬಳಿಕ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ''ಎಪಿಎಲ್​ ಮತ್ತು ಬಿಪಿಎಲ್​​ ಕಾರ್ಡ್​ದಾರರಿಗೂ ಕೂಡ ಈ ಯೋಜನೆ ಅನ್ವಯವಾಗುತ್ತದೆ'' ಎಂದು ಸ್ಪಷ್ಟಪಡಿಸಿದರು. 

''ಜೂನ್​ 15 ರಿಂದ ಜುಲೈ 15 ವರೆಗೆ ಅರ್ಜಿ ಸಲ್ಲಿಸಲು ಸಮಯವಾಕಶ ನೀಡಲಾಗುವುದು. ಮನೆ ಯಜಮಾನಿ ಕಡ್ಡಾಯವಾಗಿ  ಆದಾರ್​ ಕಾರ್ಡ್​​, ಬ್ಯಾಂಕ್​ ಅಕೌಂಟ್​ ಪಾಸ್​ಬುಕ್​ ಝೆರಾಕ್ಸ್​ ನೀಡಬೇಕು'' ಎಂದು ತಿಳಿಸಿದರು. 

Similar News