ಇದೇ ತಿಂಗಳ (ಜೂನ್) 11ರಿಂದ ಸರ್ಕಾರಿ ಬಸ್​ಗಳಲ್ಲಿ 'ಮಹಿಳೆಯರಿಗೆ ಉಚಿತ ಪ್ರಯಾಣ' ಜಾರಿ: ಸಿಎಂ ಸಿದ್ದರಾಮಯ್ಯ ಘೋಷಣೆ

''AC ಬಸ್ ಮತ್ತು ಸ್ಲೀಪರ್ ಬಸ್ ಗಳಲ್ಲಿ ಇಲ್ಲ ಅವಕಾಶ ''

Update: 2023-06-02 09:54 GMT

ಬೆಂಗಳೂರು: ಇದೇ ತಿಂಗಳ 11ರಿಂದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಜಾರಿಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. 

ಈ ಬಗ್ಗೆ ಸಂಪುಟ ಸಭೆಯ ಬಳಿಕ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,' AC ಬಸ್ ಮತ್ತು ಸ್ಲೀಪರ್ ಬಸ್ ಗಳನ್ನು ಹೊರತುಪಡಿಸಿ ಶಕ್ತಿ ಗ್ಯಾರೆಂಟಿ ಯೋಜನೆಯಡಿ ಎಲ್ಲ ಮಹಿಳೆಯರಿಗೆ, ವಿದ್ಯಾರ್ಥಿಗಳು ಉಚಿತವಾಗಿ ಸರ್ಕಾರಿ ಬಸ್​​ನಲ್ಲಿ ಸಂಚರಿಸಬಹುದಾಗಿದೆ' ಎಂದು ತಿಳಿಸಿದರು. 

Similar News