​ನಿಟ್ಟೆ ತಾಂತ್ರಿಕ ಕಾಲೇಜಿಗೆ ಜಪಾನ್ ಕೋಬಯಾಶಿ ಕ್ರಿಯೇಟ್ ತಂಡ ಭೇಟಿ

Update: 2023-06-02 14:17 GMT

ಮಂಗಳೂರು : ಜಪಾನ್ ದೇಶದ ಪ್ರತಿಷ್ಟಿತ ಕಂಪೆನಿಗಳಲ್ಲೊಂದಾದ ಕೋಬಯಾಶಿ ಕ್ರಿಯೇಟ್ ಕೋ.ಲಿಮಿಟೆಡ್‌ನ ಅಧ್ಯಕ್ಷ ತೊಮೊನರಿ ಕೋಬಯಾಶಿ ಹಾಗೂ ಎಕ್ಸಿಕ್ಯೂಟಿವ್ ಆಫೀಸರ್ ಕೋಜಿ ಸುಜುಕಿ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯಕ್ಕೆ 4 ದಿನಗಳ ಭೇಟಿಗೆ ಆಗಮಿಸಿದ್ದರು.

ಈ ಸಂದರ್ಭದಲ್ಲಿ ಕೋಬಯಾಶಿ ಸೆಂಟರ್ ಆಫ್ ಎಕ್ಸಲೆನ್ಸ್‌ನ ಕಾರ್ಯವೈಖರಿಯ ಬಗ್ಗೆ ವಿವಿಧ ಹಂತದ ಸಮಾಲೋಚನೆಗಳು ನಡೆದವು. ನಿಟ್ಟೆ ತಾಂತ್ರಿಕ ಕಾಲೇಜಿನ ಬಾಂಧವ್ಯ ವರ್ಧನೆ ಹಾಗೂ ಎಂ.ಸಿ.ಎ ವಿದ್ಯಾರ್ಥಿಗಳಿಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಈ ಭೇಟಿ ಮಹತ್ವ ಪಡೆಯಿತು. 

Similar News