ಯುರೋಪ್ ದೇಶದಲ್ಲಿ ಡ್ರೈವರ್‌ಗಳ ನೇಮಕಾತಿಗೆ ಅರ್ಜಿ ಆಹ್ವಾನ

Update: 2023-06-02 16:55 GMT

ಮಂಗಳೂರು : ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ಯುರೋಪ್ ದೇಶದಲ್ಲಿ ಡ್ರೈವರ್‌ಗಳ ನೇಮಕಾತಿಗೆ ಆಸಕ್ತ ಪುರುಷ ಹಾಗೂ ಮಹಿಳಾ ಡ್ರೈವರ್‌ಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಭಾರೀ ಟ್ರಕ್ ಹಾಗೂ ಟೈಲರ್ ಡ್ರೈವಿಂಗ್ ಉದ್ಯೋಗಕ್ಕೆ ಅರ್ಹ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ಜೂನ್ 11ರೊಳಗೆ ನಗರದ ಅಶೋಕ ನಗರದಲ್ಲಿರುವ ಉರ್ವಾ ಮಾರುಕಟ್ಟೆಯ ಕಟ್ಟಡದ 2ನೇ ಮಹಡಿಯಲ್ಲಿರುವ ಜಿಲ್ಲಾ ಕೌಶಲ್ಯಾಭಿವೃದ್ಧಿ ಕಚೇರಿಗೆ ಅರ್ಜಿ  ಸಲ್ಲಿಸಬೇಕು.

ಜೂ.20 ಹಾಗೂ 21ರಂದು ನೇರ ಸಂದರ್ಶನ ನಡೆಯಲಿದೆ. ಮೂಲವೇತನ 1,07,000 ರೂ.ಗಳಿಂದ 1,34,000 ರೂ.ಗಳು (1200-1500 ಯುರೋಗಳು) ಪ್ರತಿ ತಿಂಗಳಿಗೆ ನೀಡಲಾಗುವುದು. ವಸತಿ, ವಿಮೆ ಇತ್ಯಾದಿ ಸವಲತ್ತಿನೊಂದಿಗೆ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಸಮಾನ ಅವಕಾಶ  ನೀಡಲಾಗುವುದು ಹಾಗೂ ಇಂಗ್ಲಿಷ್ ಭಾಷೆ ಕಡ್ಡಾಯವಾಗಿ ತಿಳಿದಿರಬೇಕು.

ಹೆಚ್ಚಿನ ಮಾಹಿತಿಗೆ ಜಿಲ್ಲಾ ಸಲಹೆಗಾರರು ಮೊ.ಸಂ: 911024845/9141584259ನ್ನು ಸಂರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

Similar News