ಮಟ್ಕಾ ಪ್ರಕರಣ: 9 ಮಂದಿ ಸೆರೆ

Update: 2023-06-02 16:57 GMT

ಮಂಗಳೂರು, ಜೂ.2: ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಗುರುವಾರ 6 ಪೊಲೀಸ್ ಠಾಣೆಗಳಲ್ಲಿ 7 ಪ್ರಕರಣ ದಾಖಲಾಗಿದ್ದು, 9 ಮಂದಿಯನ್ನು ಬಂಧಿಸಲಾಗಿದೆ. 6,530 ರೂ. ಅಲ್ಲದೆ ಇತರ ಸಾಮಗ್ರಿಗಳನ್ನು ವಶಕ್ಕೆ ಪಡೆಯಲಾಗಿದೆ.

ಮುಲ್ಕಿ ಪೊಲೀಸರು 2 ಪ್ರಕರಣ ದಾಖಲಿಸಿ, ಮಂಜುನಾಥ್ ಮತ್ತು ಮುಹಮ್ಮದ್ ನಾಸರ್ ಎಂಬವರನ್ನು ಬಂಧಿಸಿದ್ದಾರೆ. 1,760 ರೂ. ವಶಪಡಿಸಿದ್ದಾರೆ.

ಪಣಂಬೂರು ಪೊಲೀಸರು 1 ಪ್ರಕರಣ ದಾಖಲಿಸಿ ಚೇತನ್ ಕುಮಾರ್‌ನನ್ನು ಬಂಧಿಸಿ 1,050 ರೂ. ವಶಪಡಿಸಿಕೊಂಡಿದ್ದಾರೆ. ಕೊಣಾಜೆ ಪೊಲೀಸರು 1 ಪ್ರಕರಣ ದಾಖಲಿಸಿ ಶಶಿಕುಮಾರ್‌ನನ್ನು ಬಂಧಿಸಿ 540 ರೂ., ಸುರತ್ಕಲ್ ಪೊಲೀಸರು 1 ಪ್ರಕರಣ ದಾಖಲಿಸಿ ತಕ್ಷಿತ್‌ನನ್ನು ಬಂಧಿಸಿ 1,200 ರೂ., ಪಾಂಡೇಶ್ವರ ಪೊಲೀಸರು 1 ಪ್ರಕರಣ ದಾಖಲಿಸಿ ತೀರ್ಥೇಶ್‌ನನ್ನು ಬಂಧಿಸಿ 440 ರೂ., ಉಳ್ಳಾಲ ಪೊಲೀಸರು 1 ಪ್ರಕರಣ ದಾಖಲಿಸಿ ಮುಹಮ್ಮದ್ ಎಚ್., ಮುಹಮ್ಮದ್ ಫಾರೂಕ್, ನವಾಝ್ ಎಂಬಾತನನ್ನು ಬಂಧಿಸಿ 1,540 ರೂ. ವಶಪಡಿಸಿಕೊಂಡಿದ್ದಾರೆ.

Similar News